ಯಾದಗಿರಿ:ಜಮೀನೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನ ಮರಾಟ ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ಪೋಲಿಸರು ಇಬ್ಬರು ಆರೋಪಿಗಳನ್ನ ಬಂಧಿಸುವ ಮೂಲಕ ಅಪಾರ ಪ್ರಮಾಣದ ಮರಳನ್ನ ಜಪ್ತಿ ಮಾಡುಡಿದ್ದಾರೆ.
ಅಕ್ರಮವಾಗಿ ಮರಳು ಸಂಗ್ರಹ: ಯಾದಗಿರಿಯಲ್ಲಿ ಇಬ್ಬರ ಬಂಧನ - ಅಕ್ರಮವಾಗಿ ಮರಳು ಸಾಗಾಟ
ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನ ಮರಾಟ ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ಪೋಲಿಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಅಕ್ರಮವಾಗಿ ಮರಳು ಸಂಗ್ರಹ
ಜಿಲ್ಲೆಯ ಗುರಮಿಠಕಲ್ ತಾಲೂಕಿನ ಕೊಂಕಲ್ ಗ್ರಾಮದ ಹಳ್ಳದ ಬಳಿ ಖಾಸಗಿ ಜಮೀನನ್ನು ಲೀಜ್ಗೆ ಪಡೆದು ಯಾವೂದೇ ಪರವಾನಿಗೆ ಪಡೆಯದೆ ಮರಳನ್ನ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಗುರಮಿಠಕಲ್ ಪೊಲೀಸರು ದಾಳಿ ನಡೆಸಿ ವೆಂಕಟೇಶ ಸೇರಿದಂತೆ ಇನ್ನೊಬ್ಬ ಆರೋಪಿಯನ್ನ ಬಂಧಿಸಿದ್ದಾರೆ. ದಾಳಿ ವೇಳೆ ಸುಮಾರು 100 ಟಿಪ್ಪರ್ಗೂ ಅಧಿಕ ಮರಳು ಸೇರಿದಂತೆ ಒಂದು ಜೆಸಿಬಿಯನ್ನ ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ಗುರಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.