ಯಾದಗಿರಿ: ಸರ್ಕಾರ ಈಗಾಗಲೇ ಕೊರೊನಾ ವೈರಸ್ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ ವಾಹನ ಸವಾರರು ಮಾತ್ರ ಸಾರಿಗೆ ಹಾಗೂ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ವಾಹನ ಸಂಚರಿಸುತ್ತಿದ್ದಾರೆ.
ಕಾರು ಚಾಲಕ-ಪೊಲೀಸರ ನಡುವೆ ವಾಗ್ವಾದ: ದಂಡ ವಿಧಿಸಿ ಬಿಸಿ ಮುಟ್ಟಿಸಿದ ಆರಕ್ಷಕ
ವಾಹನ ಸವಾರನೋರ್ವ ಕೋವಿಡ್ ಮತ್ತು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಲ್ಲದೆ, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದ. ಆತನಿಗೆ ದಂಡ ವಿಧಿಸುವ ಮೂಲಕ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಕಾರು ಚಾಲಕ-ಪೊಲೀಸರ ನಡುವೆ ವಾಗ್ವಾದ
ನಗರದ ಗಾಂಧಿ ವೃತ್ತದ ಬಳಿ ಸೀಟ್ ಬೆಲ್ಟ್ ಹಾಗೂ ಮಾಸ್ಕ್ ಧರಿಸದ ವಾಹನ ಸವಾರನನ್ನು ಪೊಲೀಸರು ಪ್ರಶ್ನಿಸಿದ್ದಕ್ಕೆ ಆತ ವಾಗ್ವಾದಕ್ಕೆ ಇಳಿದಿದ್ದಾನೆ. ಆಗ ಪೊಲೀಸರು ದಂಡ ಜಡಿದು ಬುದ್ಧಿ ಕಲಿಸಿದ್ದಾರೆ. ದಂಡದ ರಶೀದಿ ಬುಕ್ ತೆರೆಯುತ್ತಿದ್ದಂತೆ ಕಾರು ಮಾಲೀಕನು ಯುವಕರೊಂದಿಗೆ ಸೇರಿ ಗಲಾಟೆಗೆ ಮುಂದಾಗಿದ್ದ.
ಚಾಲಕ ಸೀಟ್ ಬೆಲ್ಟ್ ಹಾಕದ್ದಕ್ಕೆ ಟ್ರಾಫಿಕ್ ಪೊಲೀಸರು 500 ರೂ. ದಂಡ ವಿಧಿಸಿ ರಶೀದಿ ಕೈಯಲ್ಲಿಟ್ಟು ಬಿಸಿ ಮುಟ್ಟಿಸಿದ್ದಾರೆ.