ಕರ್ನಾಟಕ

karnataka

ETV Bharat / state

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಪೊಲೀಸರಿಂದ ನಾಲ್ವರ ಬಂಧನ - ನಾಲ್ವರನ್ನು ಬಂಧಿಸಿದ ಪೊಲೀಸರು

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಸಮುದಾಯವೊಂದರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರನ್ನು ಸೈದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

allegations of religious abuse
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ

By

Published : Sep 29, 2021, 9:01 AM IST

Updated : Sep 29, 2021, 11:00 AM IST

ಗುರುಮಠಕಲ್ (ಯಾದಗಿರಿ):ಸಮುದಾಯವೊಂದರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರನ್ನು ಸೈದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ

ತಾಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಸೆ.26ರಂದು ಬೆಳಗ್ಗೆ ಬಂದ ಆರೋಪಿಗಳು ಬಲವಂತವಾಗಿ ತಮ್ಮ ಧರ್ಮದ ಆಚರಣೆಗಳನ್ನು ಪಾಲಿಸುವಂತೆ ಒತ್ತಾಯ ಮಾಡಿದ್ದರು. ಇದನ್ನು ತಡೆಯಲು ಹೋದವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮದ ನರಸಪ್ಪ ಜೇಗರ್ ಎಂಬುವವರು ಆರೋಪಿಸಿದ್ದಾರೆ.

ಇವರ ದೂರಿನ ಆಧಾರದ ಮೇಲೆ ಮಾಧ್ವಾರ ಗ್ರಾಮದ ಜೇಮ್ಸ್ (52), ಶಾಂತರಾಜ ಜೇಮ್ಸ್ (27), ನೀಲಮ್ಮ(40) ಸೇರಿದಂತೆ ನೀಲಹಳ್ಳಿ ಗ್ರಾಮದ ಮಲ್ಲಮ್ಮ(35) ಎಂಬುವವರನ್ನು ಬಂಧಿಸಲಾಗಿದೆ. ಅಲ್ಲದೇ ಭಾರತೀಯ ದಂಡ ಸಂಹಿತೆ 1860ರ ಅಡಿ ಪ್ರಕರಣ ದಾಖಲಾಗಿದೆ.

ನೀಲಹಳ್ಳಿ ಗ್ರಾಮದಲ್ಲಿ ಮೂಲತಃ ಬೇರೆ ಸಮುದಾಯದ ಜನರು ನೆಲೆಸಿಲ್ಲ. ಈಚೆಗೆ ಗ್ರಾಮಕ್ಕೆ ಬಂದಿರುವ ಮಲ್ಲಮ್ಮ ದಲಿತ ಸಮುದಾಯದ ಬಸಲಿಂಗಪ್ಪ ಎಂಬುವವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ

ಭಾನುವಾರ ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಅನ್ಯ ಸಮುದಾಯದ ನಾಲ್ವರ ತಂಡ ಬಸಲಿಂಗಪ್ಪನ ಹೆಂಡತಿ ಪೂಜೆಗೆ ತೆರಳುತ್ತಿರುವುದನ್ನು ತಡೆದು ಪೂಜಾ ಘಂಟೆ ಬಾರಿಸಬಾರದು, ಕುಂಕುಮ ಹಚ್ಚಬೇಡಿ, ಕೈಗೆ ಬಳೆ ಹಾಕಬಾರದು ಎಂದು ಅಡ್ಡಿಪಡಿಸಿ ನಮ್ಮ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ.

ತಮ್ಮ ಧರ್ಮಕ್ಕೆ ಬಂದರೆ ಹಣ, ಬಟ್ಟೆ ಹಾಗೂ ಇತರ ಸೌಲಭ್ಯ ಕೊಡುವ ಆಮಿಷವೊಡ್ಡಿ ಸೆಳೆಯುವ ಯತ್ನ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಜನರ ವಿರುದ್ಧ ತಿರುಗಿಬಿದ್ದು, ತಮಗೆ ಸರ್ಕಾರದ ಅನುಮತಿ ಇದೆ ಎಂದು ಆವಾಜ್ ಹಾಕಿದ್ದಲ್ಲದೇ ತಡೆಯಲು ಬಂದವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ನೀಲಹಳ್ಳಿ ಗ್ರಾಮದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಈ ನಾಲ್ವರ ವಿರುದ್ಧ ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ ವೇದಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಣ್ಣೆನಗರಿಯಲ್ಲಿ ಸದ್ದು ಮಾಡಿತು ಟಗರು ಕಾಳಗ.. ಜನ್ರಿಗೆ ಸಿಕ್ತು ಭಾರಿ ಮನೋರಂಜನೆ

Last Updated : Sep 29, 2021, 11:00 AM IST

ABOUT THE AUTHOR

...view details