ಯಾದಗಿರಿ :ಗೋವನ್ನು ತಾಯಿಯಾಗಿ, ಗೋಮಾತೆಯಾಗಿ ಪೂಜಿಸುವ ನಾಡಿನಲ್ಲಿ ಅಮೃತಸಮಾನವಾದ ಹಾಲನ್ನು ವಿಷ್ಣುವಿನ ರೂಪವಾದ ವರಾಹನಿಗೆ ಹಾಲುಣಿಸಿದ ವಿಸ್ಮಯಕಾರಿ ಘಟನೆ ಜಿಲ್ಲೆಯಲ್ಲಿ ಸುರಪುರ ನಗರದ ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇಗುಲ ಆವರಣದಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ನಡೆದಿರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿತು.
ವೇಣುಗೋಪಾಲ ಸ್ವಾಮಿ ಹಾಲೋಕುಳಿ ಜಾತ್ರೆ ಸಂಭ್ರಮದಿಂದ ಆರಂಭವಾಗಿದ್ದು, ಪ್ರಥಮ ದಿನವೇ ವೇಣುಗೋಪಾಲ ಸ್ವಾಮಿಗೆ ವಿಶಿಷ್ಟ ಅಲಂಕಾರ, ಉಯ್ಯಾಲೆ ಸುಸಂದರ್ಭಲ್ಲಿ ಗೋಮಾತೆ ತನ್ನ ಕರುವಿನೊಂದಿಗೆ ಆವರಣದಲ್ಲಿ ಸಂಚರಿಸುತ್ತಿರುವಾಗ ದೇವರ ಬಾವಿ ಕಡೆಯಿಂದ ಬಂದ ಹಂದಿಯೊಂದು ನೋಡು ನೋಡುತ್ತಲೇ ಗೋಮಾತೆಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಸವಿಯಲು ಆರಂಭಿಸಿತು. ಗೋಮಾತೆ ಶಾಂತ ಚಿತ್ತದಿಂದ ಕದಲದೆ ಹಾಲು ನೀಡುತ್ತಿದ್ದರೆ ಇನ್ನೊಂದರೆ ಕರು ಸುತ್ತ ತಿರುಗುತ್ತಿತ್ತು. ಗೋಮಾತೆಯ ಮಮತೆಯಲ್ಲಿ ಕರು ಮಿಂದೆದ್ದಿತು.