ಗುರುಮಿಠಕಲ್(ಯಾದಗಿರಿ):ಕೂಲಿ ಕಾರ್ಮಿಕರು ನಾಳೆಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಬಹುದಾಗಿದೆ. ಪ್ರತಿನಿಧಿ ಒಬ್ಬರಿಗೆ 275 ರೂಪಾಯಿಯಂತೆ ನೂರು ದಿನಗಳ ಕಾಲ ಕೆಲಸ ನೀಡಲಾಗುವುದು ಎಂದು ತಾಲೂಕು ಪಂಚಾಯಿತಿ ತಿಳಿಸಿದೆ.
ಯಾದಗಿರಿ: ನಾಳೆಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ.. ತಾಪಂ ಭರವಸೆ
ಮಹಾಮಾರಿ ಕೊರೊನಾ ವೈರಸ್ ಪರಿಣಾಮ ಜನರು ಕೆಲಸ ಕಾರ್ಯವಿಲ್ಲದೇ ಮನೆಯಲ್ಲಿ ಕುಳಿತಿದ್ದಾರೆ. ಸರ್ಕಾರ ಸಂಕಷ್ಟದಲ್ಲಿರುವ ಜನರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಗಳ ಕೆಲಸ ಕೊಡಲು ಮುಂದಾಗಿದೆ.
ಮಹಾಮಾರಿ ಕೊರೊನಾ ವೈರಸ್ ಪರಿಣಾಮ ಜನರು ಕೆಲಸ ಕಾರ್ಯವಿಲ್ಲದೇ ಮನೆಯಲ್ಲಿ ಕುಳಿತಿದ್ದಾರೆ. ಸರ್ಕಾರ ಸಂಕಷ್ಟದಲ್ಲಿರುವ ಜನರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಗಳ ಕೆಲಸ ಕೊಡಲು ಮುಂದಾಗಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪುಟಪಾಕ್ ಗ್ರಾಮದಲ್ಲಿ ವಿವಿಧ ರೈತರ ಜಮೀನಿನಲ್ಲಿ ಬದು (ಒಡ್ಡು) ಹಾಕುವ ಕೆಲಸಕ್ಕೆ ನಾಳೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ಗುರುಮಠಕಲ್ ತಾ.ಪಂ. ಇಒ ಬಸವರಾಜ್ ಶರಭೈ ಹಾಗೂ ಇತರ ಅಧಿಕಾರಿಗಳು ರೈತರ ಜಮೀನಿನಗೆ ತರಳಿ ಪರಿಶೀಲನೆ ನಡೆಸಿದ್ರು. ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕರು ನಾಳೆಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.