ಯಾದಗಿರಿ:ಜಿಲ್ಲೆಯಲ್ಲಿ ಹರಿಯುವ ಕೃಷ್ಣ ನದಿ ತೀರದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಕಾಟದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಕೃಷ್ಣಾ ನದಿಯಲ್ಲಿ ನೀರಿನ ಹರಿವು ಇಳಿ ಮುಖವಾದ ಹಿನ್ನೆಲೆ ನದಿ ತೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊಸಳೆಗಳು ಆಹಾರ ಅರಸಿ ಹೊರಬರುತ್ತಿವೆ.
ಕೃಷ್ಣಾ ನದಿ ತೀರದಲ್ಲಿ ಮೊಸಳೆಗಳ ಉಪಟಳ... ಸಾರ್ವಜನಿಕರ ಆತಂಕ - ಕೃಷ್ಣ ನದಿ ತೀರದಲ್ಲಿ ಮೊಸಳೆ
ಕೃಷ್ಣ ನದಿಯಲ್ಲಿ ನೀರಿನ ಹರಿವು ದಿನೇ ದಿನೇ ಕಡಿಮೆಯಾಗುತ್ತಿದ್ದು, ಮೊಸಳೆಗಳ ಕಾಟ ಹೆಚ್ಚಾಗುತ್ತಿವೆ. ಸದ್ಯ ಆಹಾರ ಅರಿಸಿ ನೀರಿನಿಂದ ಹೊರಬರುತ್ತಿರುವುದು ಕಂಡ ಸ್ಥಳೀಯರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

ಮೊಸಳೆಯ ಕಾಟಕ್ಕೆ ಬೇಸತ್ತ ಜನ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಂಡ್ಲುರು ಗ್ರಾಮದ ಕೃಷ್ಣ ನದಿಯಲ್ಲಿ ಮೊಸಳೆಗಳು ನದಿ ದಡಕ್ಕೆ ಬರುತ್ತಿದ್ದು, ಇದರಿಂದ ನದಿ ತೀರಕ್ಕೆ ರೈತರು ತಮ್ಮ ಜಾನುವಾರುಗಳನ್ನು ಕರೆದುಕೊಂಡು ಹೋಗಲು ಭಯಪಡುವಂತಾಗಿದೆ.
ಮೊಸಳೆಯ ಕಾಟಕ್ಕೆ ಬೇಸತ್ತ ಜನ
ಮೊನ್ನೆಯಷ್ಟೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಜಲಾಶಯದ ಮೇಲೆ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಇದನ್ನು ಕಂಡ ವಿಜಯಪುರ ಜಿಲ್ಲೆಯ ಅರಣ್ಯಾಧಿಕಾರಿಗಳು ಮೊಸಳೆಯನ್ನು ಜಲಾಶಯಕ್ಕೆ ವಾಪಾಸ್ ಬಿಟ್ಟಿದ್ದರು. ಹಾಗೂ ನಾರಾಯಣಪುರ ಜಲಾಶಯದಲ್ಲಿ ಮೃತಪಟ್ಟಿರುವ ಮೊಸಳೆ ಕೂಡ ಪತ್ತೆಯಾಗಿತ್ತು.