ಕರ್ನಾಟಕ

karnataka

ETV Bharat / state

ಕೊರೊನಾ ಭೀತಿಗೆ ಡೋಂಟ್​​ ಕೇರ್​​: ಸುರಪುರದಲ್ಲಿ ಎಂದಿನಂತೆ ಜನರ ಓಡಾಟ - Yadagira Quarantine Center

ಯಾದಗಿರಿಯಲ್ಲಿ ಕೊರೊನಾ ಪ್ರಕರಣ ದಾಖಲಾಗುತ್ತಿದ್ದರೂ ಜನತೆ ಮಾತ್ರ ಕೊರೊನಾ ಕುರಿತು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜಿಲ್ಲಾಡಳಿತ ಕೊರೊನಾ ತಡೆಯಲು ಅಗತ್ಯ ಕ್ರಮ ಕೈಗೊಂಡಿದೆಯಾದರೂ, ಜನತೆ ಮಾತ್ರ ಯಾವ ನಿಯಮವನ್ನು ಸರಿಯಾಗಿ ಪಾಲಿಸುತ್ತಿರುವಂತೆ ಕಾಣುತ್ತಿಲ್ಲ. ನಗರದ ಪ್ರಮುಖ ಬೀದಿಯಲ್ಲಿ ಜನರ ಓಡಾಟ ಹೆಚ್ಚಾಗಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

people say dont care to Corona outbreak in Surapura
ಕೊರೊನಾ ಭೀತಿಗೆ ಡೋಂಟ್​​ ಕೇರ್​​: ಸುರಪುರದಲ್ಲಿ ಎಂದಿನಂತೆ ಜನರ ಓಡಾಟ

By

Published : May 18, 2020, 8:55 PM IST

ಸುರಪುರ (ಯಾದಗಿರಿ): ನಗರದ ಆಸರ ಮೊಹಲ್ಲಾದ ಕುಟುಂಬವೊಂದರ ದಂಪತಿಯಲ್ಲಿ ಕೊರೊನಾ ಸೋಂಕು ಕಂಡುಬಂದು, ಇನ್ನೂ ಇಬ್ಬರನ್ನು ಕ್ವಾರಂಟೈನ್‌ಗೊಳಿಸಲಾಗಿದೆ. ಅಲ್ಲದೆ ಆಸರ ಮೊಹಲ್ಲಾದಿಂದ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್​​​​ ಝೋನ್ ಎಂದು ಘೋಷಿಸಿದ್ದಲ್ಲದೆ ಬಹುತೇಕ ನಗರವೇ ಬಫರ್ ಝೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ‌.

ಆದರೆ ಜನರು ಮಾತ್ರ ಕೊರೊನಾ ಸೋಂಕಿನ ಬಗ್ಗೆ ಅರಿವಿಲ್ಲದೆ ಓಡಾಡುತ್ತಿದ್ದಾರೆ. ಈಗಾಗಲೆ ಜಿಲ್ಲಾಧಿಕಾರಿಗಳು ಲಾಕ್‌ಡೌನ್ ನಿಯಮದಂತೆ ಕೇವಲ ದಿನಸಿ ಅಂಗಡಿ ಮತ್ತು ಅಗತ್ಯ ವಸ್ತುಗಳ ಅಂಗಡಿಗಳನ್ನು ಮಾತ್ರ ತೆಗೆಯಲು ಅವಕಾಶ ನೀಡಿದ್ದಾರೆ. ನಗರದೆಲ್ಲೆಡೆ ಕಿರಾಣಿ ಅಂಗಡಿ ಮತ್ತು ಹಾಲು, ತರಕಾರಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಸುರಪುರದಲ್ಲಿ ಎಂದಿನಂತೆ ಜನರ ಓಡಾಟ

ಇಷ್ಟೆಲ್ಲ ವ್ಯವಸ್ಥೆ ಕಲ್ಪಿಸಿದ್ದರು ಜನರು ಮಾತ್ರ ದರ್ಬಾರ್ ರಸ್ತೆ, ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ವೃತ್ತದ ಸುತ್ತಮುತ್ತ ನೂರಾರು ಸಂಖ್ಯೆಯಲ್ಲಿ ಸೇರುವ ಮೂಲಕ ಲಾಕ್‌ಡೌನ್ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಜಿಲ್ಲಾ ಮತ್ತು ತಾಲೂಕು ಆಡಳಿತ ಕೂಡಲೆ ಜನರ ಓಡಾಟಕ್ಕೆ ಕಡಿವಾಣ ಹಾಕಬೇಕೆಂದು ‌ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details