ಯಾದಗಿರಿ: ಕಿಲ್ಲರ ಕೊರೊನಾ ವೈರಸ್ನ ಅಟ್ಟಹಾಸ ಜಿಲ್ಲೆಯಲ್ಲೂ ಮುಂದುವರೆದಿದ್ದು, ಹೆಚ್ಚುತ್ತಿರುವ ಮಹಾಮಾರಿ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ನಿರ್ಬಂಧಿತ ಪ್ರದೇಶಗಳನ್ನೇನೋ ಘೋಷಣೆ ಮಾಡಿದೆ. ಆದರೆ, ಜಿಲ್ಲಾಡಳಿತ ಘೋಷಣೆ ಮಾಡಿದ ಆದೇಶಕ್ಕೆ ಮಾತ್ರ ಜನ ಕವಡೆಕಾಸಿನ ಕಿಮ್ಮತ್ತೂ ನಿಡುತ್ತಿಲ್ಲ. ಕಂಟೇನ್ಮೆಂಟ್ ಝೋನ್ಗಳಲ್ಲಿನ ನಿವಾಸಿಗಳು ಅಡ್ಡಾದಿಡ್ಡಿ ಓಡಾಡುವ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಿ ಭೀತಿ ಹೆಚ್ಚಿಸುತ್ತಿದ್ದಾರೆ.
ಹಸಿರು ವಲಯವಾದ ಯಾದಗಿರಿ ಈಗ ಸಂಪೂರ್ಣ ಕೆಂಪು ವಲಯವಾಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 881 ಕ್ಕೆ ಏರಿಕೆಯಾಗುವ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳನ್ನ ಹೊಂದಿದ ನಾಲ್ಕನೇ ಸ್ಥಾನಕ್ಕೆ ಯಾದಗಿರಿ ಜಿಲ್ಲೆ ತಲುಪಿದೆ. ಮಹಾರಾಷ್ಟ್ರದಿಂದ ಆಗಮಿಸಿದ ವಲಸಿಗರಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸೋಂಕು ಪತ್ತೆಯಾಗುತ್ತಿದ್ದು, ಈಗ ಸಮುದಾಯದ ಹಂತಕ್ಕೂ ಈ ಡೆಡ್ಲಿ ವೈರಸ್ ವ್ಯಾಪಿಸುತ್ತಿದೆ.