ಕರ್ನಾಟಕ

karnataka

ETV Bharat / state

'ಸುರಪಾನ'ಪ್ರಿಯರಿಗೆ ಇಂದು ಹಬ್ಬ: ಸುರಪುರದ ಬಾರ್​ ಬಾಗಿಲ ಮುಂದೆ ಜನವೋ ಜನ - ಸುರಪುರದಲ್ಲಿ 'ಬಾರ್'​ ಬಾಗಿಲ ಮುಂದೆ ಜಮಾಯಿಸಿದ್ರು ಮದ್ಯಪ್ರಿಯರು

ಮದ್ಯ ಪ್ರಿಯರು ಕಳೆದೊಂದು ತಿಂಗಳಿನಿಂದ ಎಣ್ಣೆ ಇಲ್ಲದೆ ಕಂಗೆಟ್ಟಿದ್ದು, ಈ ದಿನ ಕುಡುಕರ ಪಾಲಿಗೆ ಹಬ್ಬದ ದಿನದಂತಾಗಿದೆ. ನಗರದಲ್ಲಿನ ಬಾರ್‌ಗಳು ಬೆಳಿಗ್ಗೆ 9 ಗಂಟೆಗೆ ತೆರೆಯುವ ಮುಂಚೆಯೇ ಜನರು ಸಾಲುಗಟ್ಟಿ ನಿಂತಿದ್ದಾರೆ.

people gathered for alcohol in front of the bar at surapura
'ಸುರ'ಪ್ರಿಯರಿಗೆ ಇಂದು ಹಬ್ಬವೋ ಹಬ್ಬ.

By

Published : May 4, 2020, 3:53 PM IST

ಸುರಪುರ: ಗ್ರೀನ್ ಝೋನ್ ಪ್ರದೇಶಗಳಲ್ಲಿ ಇಂದಿನಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತೆರೆದಿರಲಿವೆ ಎಂದು ಸುದ್ದಿ ಕೇಳಿದ್ದೇ ತಡ ನಗರದೆಲ್ಲೆಡೆ ಜನ ಜಂಗುಳಿ ಸೇರಿದೆ.

ಮದ್ಯಪ್ರಿಯರು ಕಳೆದೊಂದು ತಿಂಗಳಿನಿಂದ ಎಣ್ಣೆ ಇಲ್ಲದೆ ಕಂಗೆಟ್ಟಿದ್ದು, ಈ ದಿನ ಕುಡುಕರ ಪಾಲಿಗೆ ಹಬ್ಬದ ದಿನದಂತಾಗಿದೆ. ನಗರದಲ್ಲಿನ ಬಾರ್‌ಗಳು ಬೆಳಿಗ್ಗೆ 9 ಗಂಟೆಗೆ ತೆರೆಯುವ ಮುಂಚೆಯೇ ಜನರು ಸಾಲುಗಟ್ಟಿ ನಿಂತಿದ್ದಾರೆ.

ನಗರದ ಹೃದಯ ಭಾಗದಂತಿರುವ ಮಹಾತ್ಮ ಗಾಂಧಿ ವೃತ್ತದ ಬಳಿಯ ವೈನ್‌ಶಾಪ್ ಮುಂದೆ ನೂರಾರು ಸಂಖ್ಯೆಯಲ್ಲಿ 'ಎಣ್ಣೆ'ಗಾಗಿ ಕ್ಯೂ ನಿಂತ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ನಗರದ ಗಾಂಧಿ ವೃತ್ತದಲ್ಲಿ ಎಡ ಭಾಗಕ್ಕೆ ವೈನ್‌ಶಾಪ್ ಇದ್ದರೆ, ಬಲ ಭಾಗಕ್ಕೆ ನಗರ ಸರ್ಕಾರಿ ಆಸ್ಪತ್ರೆ ಇದೆ. ಕುತೂಹಲದ ಸಂಗತಿ ಎಂದರೆ ರಸ್ತೆಯ ಎಡ ಭಾಗದಲ್ಲಿ ಎಣ್ಣೆಗಾಗಿ ಮತ್ತು ಬಲ ಭಾಗದಲ್ಲಿ ಗುಳೆ ಹೋಗಿ ಬಂದ ಜನರು ಫಿವರ್ ಚೆಕ್‌ಗಾಗಿ ಕ್ಯೂ ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.

ABOUT THE AUTHOR

...view details