ಕರ್ನಾಟಕ

karnataka

ETV Bharat / state

ಖಾಸಗಿಯವರಿಂದ ದುಪ್ಪಟ್ಟು ಸುಲಿಗೆ : ಟಿಕೆಟ್​ಗೆ ಹಣವಿಲ್ಲದೆ ಪರದಾಡಿದ ತಾಯಿ-ಮಕ್ಕಳು

ಸಾರಿಗೆ ನೌಕರರ ಮುಷ್ಕರದಿಂದ ಬಸ್​​ ವ್ಯವಸ್ಥೆಯಿಲ್ಲದೆ ಜನರಿಗೆ ತೀವ್ರ ಸಮಸ್ಯೆಯಾಗಿದೆ. ಖಾಸಗಿ ಬಸ್​ಗಳು ಇದ್ದರೂ, ಹೆಚ್ಚಿನ ಹಣ ಕೇಳುತ್ತಿರುವುದರಿಂದ ಬಡ ಜನರು ಸಂಕಷ್ಟ ಎದುರಿಸುವಂತಾಗಿದೆ. ಯಾದಗಿರಿ ಬಸ್​ ನಿಲ್ದಾಣದಲ್ಲಿ ಟಿಕೆಟ್​ಗೆ ಹಣವಿಲ್ಲದೆ ಮಹಿಳೆ ತನ್ನ ಮಕ್ಕಳೊಂದಿಗೆ ಪರದಾಡುತ್ತಿದ್ದ ದೃಶ್ಯ ಕಂಡು ಬಂತು.

people facing problem due to Bus Strike
ಟಿಕೆಟ್​ಗೆ ಹಣವಿಲ್ಲದೆ ಪರದಾಡಿದ ತಾಯಿ, ಮಕ್ಕಳು

By

Published : Apr 8, 2021, 5:11 PM IST

ಯಾದಗಿರಿ :ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸರ್ಕಾರಿ ಬಸ್​ಗಳಿಗೆ ಪರ್ಯಾಯವಾಗಿ ರಸ್ತೆಗಿಳಿದಿರುವ ಖಾಸಗಿ ಬಸ್​ನವರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ.

ಖಾಸಗಿ ಬಸ್​ನವರು ಹೆಚ್ಚಿನ ಹಣ ಕೇಳಿದ್ದರಿಂದ ಜ್ವರದಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗಾಗಿ ರಾಯಚೂರು ನಗರಕ್ಕೆ ತೆರಳಲು ಯಾದಗಿರಿ ಕೇಂದ್ರ ಬಸ್​ ನಿಲ್ದಾಣಕ್ಕೆ ಹೊಸಹಳ್ಳಿ ಗ್ರಾಮದ ಮಹಿಳೆಯೊಬ್ಬರು ಸಂಕಷ್ಟ ಅನುಭವಿಸುವಂತಾಯಿತು.

ಟಿಕೆಟ್​ಗೆ ಹಣವಿಲ್ಲದೆ ಪರದಾಡಿದ ತಾಯಿ, ಮಕ್ಕಳು

ಓದಿ : ಖಾಸಗಿ ಬಸ್​ನಿಂದ ದುಪ್ಪಟ್ಟು ದರ ವಸೂಲಿ: ತರೀಕೆರೆಯಿಂದ ಶಿವಮೊಗ್ಗ‌ಕ್ಕೆ 80 ರೂ.!

ಖಾಸಗಿ ಬಸ್​ನವರು ರಾಯಚೂರಿಗೆ ಕರೆದುಕೊಂಡು ಹೋಗಲು 1600 ರಿಂದ 2 ಸಾವಿರ ರೂ. ಕೇಳಿದ್ದರು. ಅಷ್ಟು ಹಣ ಕೊಡಲು ಸಾಧ್ಯವಾಗದೆ ಮಹಿಳೆ ಬಸ್​ ನಿಲ್ದಾಣದಲ್ಲಿ ದಿಕ್ಕು ತೋಚದೆ ನಿಂತಿದ್ದರು.

ABOUT THE AUTHOR

...view details