ಕರ್ನಾಟಕ

karnataka

ETV Bharat / state

ಸಂಡೇ ಲಾಕ್​ಡೌನ್​.. ಯಾದಗಿರಿಯಲ್ಲಿ ಕ್ಯಾರೇ ಎನ್ನದ ಸಾರ್ವಜನಿಕರು!! - lackdown news

ಲಾಕ್​ಡೌನ್​ ಇದ್ದರೂ ನಗರದ ಸುಭಾಷ್ ವೃತ್ತ ಸೇರಿ ಹಲವು ಪ್ರಮುಖ ರಸ್ತೆಗಳಲ್ಲಿ ಹೂವಿನ ವ್ಯಾಪಾರ, ಹಣ್ಣಿನ ವ್ಯಾಪಾರ ಜೋರಾಗಿ ಸಾಗುತ್ತಿದೆ. ವಾಹನ ಸಂಚಾರ ಕೂಡ ಎಂದಿನಂತೆ ಸಾಗಿದೆ. ಪೊಲೀಸರು ಕೂಡ ಹೆಚ್ಚು ತಲೆ ಕೆಡಿಸಿಕೊಳ್ಳದೆ ಲಾಕ್​ಡೌನ್ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ..

lackdown
ಸಂಡೇ ಲಾಕ್​ಡೌನ್

By

Published : Jul 5, 2020, 3:20 PM IST

ಯಾದಗಿರಿ :ಸರ್ಕಾರದ ಆದೇಶದಂತೆ ಪ್ರತಿ ಭಾನುವಾರ ಅಗಸ್ಟ್ 2ರವರೆಗೆ ರಾಜ್ಯಾದ್ಯಂತ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಮೊದಲ ವಾರವೇ ಲಾಕ್‌ಡೌನ್​ಗೆ ಜನ ಡೋಂಟ್ ಕೇರ್ ಎನ್ನುವ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿದ ಆದೇಶಕ್ಕೆ ಜಿಲ್ಲೆಯ ಜನ ಸೊಪ್ಪು ಹಾಕಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ಅನಾವಶ್ಯಕವಾಗಿ ತಿರುಗಾಡುತ್ತಿದ್ದಾರೆ. ಲಾಕ್​ಡೌನ್​ ಇದ್ದರೂ ನಗರದ ಸುಭಾಷ್ ವೃತ್ತ ಸೇರಿ ಹಲವು ಪ್ರಮುಖ ರಸ್ತೆಗಳಲ್ಲಿ ಹೂವಿನ ವ್ಯಾಪಾರ, ಹಣ್ಣಿನ ವ್ಯಾಪಾರ ಜೋರಾಗಿ ಸಾಗುತ್ತಿದೆ. ವಾಹನ ಸಂಚಾರ ಕೂಡ ಎಂದಿನಂತೆ ಸಾಗಿದೆ. ಪೊಲೀಸರು ಕೂಡ ಹೆಚ್ಚು ತಲೆ ಕೆಡಿಸಿಕೊಳ್ಳದೆ ಲಾಕ್​ಡೌನ್ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ.

ಸಂಡೇ ಲಾಕ್​ಡೌನ್‌ಗೆ ಮಿಶ್ರಪ್ರತಿಕ್ರಿಯೆ

ಈಗಾಗಲೇ ಜಿಲ್ಲಾಡಳಿತ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿದೆ. ಅಗತ್ಯ ವಸ್ತುಗಳ ಹೊರತು ಎಲ್ಲಾ ವಹಿವಾಟುಗಳನ್ನ ಬಂದ್ ಮಾಡಿದೆ. ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆಗಳಲ್ಲಿ ಸಂಚರಿಸಬಾರದು ಎಂಬ ಆದೇಶ ಹೊರಡಿಸಿದೆ. ಆದರೆ, ಜನರು ಮಾತ್ರ ಯಾವ ಆದೇಶಕ್ಕೂ ತಲೆಕೆಡಿಸಿಕೊಂಡಂತೆ ಕಂಡಿಲ್ಲ.

ABOUT THE AUTHOR

...view details