ಯಾದಗಿರಿ: ಇಂದು ರಾತ್ರಿಯಿಂದಲೇ ಒಂದು ವಾರದವರೆಗೆ ಯಾದಗಿರಿ ಜಿಲ್ಲೆ ಸಂಪೂರ್ಣ ಲಾಕ್ಡೌನ್ ಆಗುತ್ತಿರುವ ಹಿನ್ನೆಲೆ ನಗರದಲ್ಲಿಂದು ವ್ಯಾಪಾರ, ವಹಿವಾಟು ಮಂದವಾಗಿದೆ.
ಯಾದಗಿರಿಯಲ್ಲಿ ಲಾಕ್ಡೌನ್ಗೂ ಮುನ್ನವೇ ರಸ್ತೆಗಿಳಿಯದ ಜನತೆ - Yadagiri Corona case
ಕೊರೊನಾ ಹೆಚ್ಚಾಗುತ್ತಿದ್ದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಲಾಕ್ಡೌನ್ಗೆ ನಿರ್ಧರಿಸಲಾಗಿದೆ. ಈ ಹಿನ್ನೆಲೆ ಯಾದಗಿರಿಯಲ್ಲೂ ಲಾಕ್ಡೌನ್ಗೆ ನಿರ್ಧರಿಸಲಾಗಿದ್ದು, ಅಂಗಡಿ-ಮುಂಗ್ಗಟ್ಟುಗಳು ಜನರಿಲ್ಲದೆ ಬಣಗುಡುತ್ತಿವೆ..
ಯಾದಗಿರಿಯಲ್ಲಿ ಲಾಕ್ಡೌನ್ ಮುನ್ನವೇ ರಸ್ತೆಗಿಳಿಯದ ಜನತೆ
ಕೊರೊನಾ ಹರಡುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಇಂದು ರಾತ್ರಿ 8ಗಂಟೆಯಿಂದ ಒಂದು ವಾರಗಳ ಕಾಲ ಜಿಲ್ಲಾಡಳಿತ ಲಾಕ್ಡೌನ್ ಆದೇಶ ಹೊರಡಿಸಿದೆ. ಇದರಿಂದಾಗಿ ಇಂದಿನಿಂದಲೇ ನಗರದ ಬಟ್ಟೆ ಅಂಗಡಿ, ಹೋಟೆಲ್ ಸೇರಿ ತರಕಾರಿ ವ್ಯಾಪಾರ ಡಲ್ ಹೊಡೆದಿವೆ.
ಲಾಕ್ಡೌನ್ ಆದೇಶ ಜಾರಿಯಾಗುತ್ತಿರುವ ಹಿನ್ನೆಲೆ ಗ್ರಾಮಾಂತರ ಪ್ರದೇಶಗಳಿಂದ ಜನ ಕೂಡ ನಗರದತ್ತ ಬಾರದ ಕಾರಣ ನಗರದ ಎಲ್ಲಾ ಅಂಗಡಿ-ಮುಂಗಟ್ಟುಗಳಲ್ಲಿ ಗ್ರಾಹಕರೆ ಇಲ್ಲದಂತಾಗಿದೆ. ಅಲ್ಲದೆ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ದೊರೆಯುವ ಮುನ್ಸೂಚನೆ ದೊರೆತಿದೆ.