ಯಾದಗಿರಿ: 'ನಮ್ಮನ್ನ ಮನೆಗೆ ಹೋಗಲು ಬಿಡಿ' ಎಂದು ಕ್ವಾರಂಟೈನ್ ಕೇಂದ್ರದಲ್ಲಿದ್ದ ಕಾರ್ಮಿಕರು ಕೇಂದ್ರದ ಬೀಗ ಮುರಿದು ಹೊರ ಬಂದಿದ್ದಾರೆ.
ಬೀಗ ಮುರಿದು ಕ್ವಾರಂಟೈನ್ ಕೇಂದ್ರದಿಂದ ಹೊರ ಬಂದ ಕಾರ್ಮಿಕರು: ಕಾರಣ? - Yadagiri news
ಅವಧಿ ಮುಗಿದರೂ ನಮ್ಮನ್ನು ನಮ್ಮ ಊರಿಗೆ ಕಳುಹಿಸದೆ ಇಲ್ಲೇ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಕಾರ್ಮಿಕರು, ಯಾದಗಿರಿ ತಾಲೂಕಿನ ಶೆಟ್ಗಿಗೇರ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದ ಬೀಗ ಮುರಿದು ಹೊರಬಂದಿದ್ದಾರೆ.

ಬೀಗ ಮುರಿದು ಕ್ವಾರಂಟೈನ್ ಕೇಂದ್ರದಿಂದ ಹೊರ ಬಂದ ಕಾರ್ಮಿಕರು
ಕ್ವಾರಂಟೈನ್ ಅವಧಿ ಮುಗಿದರೂ ಕೂಡ ನಮ್ಮನ್ನು ಮನೆಗೆ ಕಳುಹಿಸುತ್ತಿಲ್ಲ ಎಂದು ಆರೋಲಿಸಿರುವ ಕಾರ್ಮಿಕರು, ಕೇಂದ್ರದಿಂದ ಹೊರ ಬಂದು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದ್ದಾರೆ.
ಯಾದಗಿರಿ ತಾಲೂಕಿನ ಶೆಟ್ಗಿಗೇರ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಈ ಘಟನೆ ಜರುಗಿದೆ. ಇತ್ತೀಚೆಗೆ ಮಹರಾಷ್ಟ್ರದಿಂದ ಆಗಮಿಸಿದ 206 ವಲಸೆ ಕಾರ್ಮಿಕರನ್ನು ಈ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಕ್ವಾರಂಟೈನಿಗರನ್ನು ಪೋಲಿಸರು ತಡೆದು ಸಮಾಧಾನ ಪಡಿಸಿದ್ದಾರೆ.