ಯಾದಗಿರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಆಮದು ಮಾಡಿಕೊಳ್ಳಲಾಗುತ್ತಿದೆ.
ಈಗಾಗಲೇ ಯಾದಗಿರಿ ನೂತನ ಜಿಲ್ಲಾಸ್ಪತ್ರೆಯಲ್ಲಿ ಸ್ವಂತ ಆಕ್ಸಿಜನ್ ಉತ್ಪಾದನೆ ಕೇಂದ್ರ ಘಟಕ ಹೊಂದಿದ್ದರೂ ಸಹ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗೆ ಟನ್ ಗಟ್ಟಲೆ ಆಕ್ಸಿಜನ್ ಬಂದಿಳಿದಿದೆ. ನಾಗಾಲ್ಯಾಂಡ್ ಪಾಸಿಂಗ್ ಇರುವ ವಾಹನದ ಮೂಲಕ 11 ಟನ್ ಆಕ್ಸಿಜನ್ನ್ನು ಆಮದು ಮಾಡಿಕೊಂಡಿದ್ದು, ಹೊಸಪೇಟೆ ಖಾಸಗಿ ಕಾರ್ಖಾನೆಗಳು ಈ ಆಕ್ಸಿಜನ್ ನೀಡಿವೆ.