ಕರ್ನಾಟಕ

karnataka

ETV Bharat / state

ಯಾದಗಿರಿ ಗ್ರೀನ್ ಝೋನ್​​ನಲ್ಲಿದ್ದರೂ ಲಾಕ್​​​​​ಡೌನ್ ಸಡಿಲಿಕೆಗೆ ಬ್ರೇಕ್ - ಯಾದಗಿರಿ ಗ್ರೀನ್ ಝೋನ್​​ನಲ್ಲಿದ್ದರು ಲಾಕ್ ಡೌನ್ ಸಡಿಲಿಕೆಗೆ ಬ್ರೇಕ್

ಮೇ 11ರ ಮಧ್ಯರಾತ್ರಿಯಿಂದ ಮೇ 12 ರ ಮಧ್ಯರಾತ್ರಿ ವರಗೆ ಕೊರೊನಾ ಮುಂಜಾಗ್ರತ ಕ್ರಮವಾಗಿ ಎಲ್ಲ ಅಂಗಡಿ ಬಂದ್ ಮಾಡಲಾಗಿದೆ. ಕೇವಲ ತರಕಾರಿ ಹಾಗೂ ಅಗತ್ಯ ತುರ್ತು ಸೇವೆಗೆ ಮಾತ್ರ ಅವಕಾಶ ಮಾಡಲಾಗಿದ್ದು, ಮದ್ಯದಂಗಡಿ ಸಹ ಬಂದ್ ಮಾಡಲು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.

No Lockdown Relaxation in Yadagiri
ಲಾಕ್ ಡೌನ್ ಸಡಿಲಿಕೆಗೆ ಬ್ರೇಕ್

By

Published : May 12, 2020, 10:37 AM IST

ಯಾದಗಿರಿ: ಜಿಲ್ಲೆ ಗ್ರೀನ್ ಝೋನ್​​ನಲ್ಲಿದ್ದರೂ ಕೊರೊನಾ ಭೀತಿ ಹಿನ್ನೆಲೆ ಲಾಕ್​​​​​​ಡೌನ್​​​​ ಸಡಿಲಿಕೆಗೆ ಬ್ರೇಕ್ ಹಾಕಲಾಗಿದೆ.

ಮೇ 11 ರ ಮಧ್ಯರಾತ್ರಿಯಿಂದ ಮೇ 12ರ ಮಧ್ಯರಾತ್ರಿ ವರಗೆ ಕೊರೊನಾ ಮುಂಜಾಗ್ರತ ಕ್ರಮವಾಗಿ ಎಲ್ಲ ಅಂಗಡಿ ಬಂದ್ ಮಾಡಲಾಗಿದೆ. ಕೇವಲ ತರಕಾರಿ ಹಾಗೂ ಅಗತ್ಯ ತುರ್ತು ಸೇವೆಗೆ ಮಾತ್ರ ಅವಕಾಶ ಮಾಡಲಾಗಿದ್ದು, ಮದ್ಯದಂಗಡಿ ಸಹ ಬಂದ್ ಮಾಡಲು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.

ಲಾಕ್​​​​​ಡೌನ್ ಸಡಿಲಿಕೆಗೆ ಬ್ರೇಕ್

ಯಥಾರೀತಿ ಜಿಲ್ಲಾದ್ಯಂತ 144 ನಿಷೇಧಾಜ್ಞೆ ಜಾರಿ ಯಾಗಿದ್ದು, ಹಸಿರು ವಲಯ ಜಿಲ್ಲೆಗೆ ಕಾದಿದೆಯಾ ಕೊರೊನಾ ಭೀತಿ ಎಂಬ ಆತಂಕ ಸೃಷ್ಟಿಯಾಗಿದೆ. ಯಾದಗಿರಿಗೆ ಆಗಮಿಸುತ್ತಿರುವ ಮಹಾರಾಷ್ಟ್ರ, ಗೋವಾ ಹಾಗೂ ಮೊದಲಾದ ಭಾಗದ ಕಾರ್ಮಿಕರ ಆಗಮನದಿಂದ ಹೆಚ್ಚಾದ ಕೊರೊನಾ ಭೀತಿ ಹಿನ್ನೆಲೆ ಜಿಲ್ಲಾಧಿಕಾರಿ ಕೂರ್ಮರಾವ್ ಅಂಗಡಿ ವ್ಯಾಪಾರ ಬಂದ್ ಮಾಡಲು ಆದೇಶ ಹೊರಡಿಸಿದ್ದಾರೆ.

ಮೇ 4 ರಿಂದ ಗ್ರೀನ್ ಝೋನ್ ಜಿಲ್ಲೆಯಲ್ಲಿ ಎಲ್ಲ ರೀತಿಯ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಈಗ ಕೊರೊನಾ ಭೀತಿ ಹಿನ್ನೆಲೆ ಕಟ್ಟುನಿಟ್ಟಿನ 144 ನಿಷೇಧಾಜ್ಞೆ ಜಾರಿಗೊಳಿಸಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.

ABOUT THE AUTHOR

...view details