ಕರ್ನಾಟಕ

karnataka

ETV Bharat / state

ಮೂಲ ಸೌಕರ್ಯವಿಲ್ಲದೇ ಏದಲಬಾವಿ ತಾಂಡಾ ಕಂಗಾಲು: ಕತ್ತಲಲ್ಲೇ ಜೀವನ, ಬೇಕಿದೆ ಬೆಳಕಿನ ಆಸರೆ - ಸುರಪುರ

ಏದಲಬಾವಿ ತಾಂಡಾದಲ್ಲಿ ಸುಮಾರು 40 ಮನೆಗಳಿದ್ದು, 250ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ತಾಂಡಾದಲ್ಲಿ ಕಳೆದ 6 ತಿಂಗಳಿನಿಂದ ವಿದ್ಯುತ್ ಸಂಪರ್ಕವಿಲ್ಲದೇ ಜನರು ಪರದಾಡುತ್ತಿದ್ದಾರೆ.

ಮೂಲಭೂತ ಸೌಕರ್ಯವಿಲ್ಲದೆ ಸಂಕಷ್ಟದಲ್ಲಿ ಏದಲಬಾವಿ ತಾಂಡದ ಜನತೆ
ಮೂಲಭೂತ ಸೌಕರ್ಯವಿಲ್ಲದೆ ಸಂಕಷ್ಟದಲ್ಲಿ ಏದಲಬಾವಿ ತಾಂಡದ ಜನತೆ

By

Published : Aug 19, 2020, 11:52 AM IST

Updated : Aug 19, 2020, 3:05 PM IST

ಸುರಪುರ: ಹುಣಸಿಗಿ ತಾಲೂಕಿನ ರಾಜನಕೋಳೂರು ಸಮೀಪದ ಏದಲಬಾವಿ ತಾಂಡಾದಲ್ಲಿ ಮೂಲ ಸೌಕರ್ಯಗಳಿಲ್ಲದೇ ಜನರು ಪರದಾಡುವಂತಾಗಿದೆ. ಏದಲಬಾವಿ ತಾಂಡಾದಲ್ಲಿ ಸುಮಾರು 40 ಮನೆಗಳಿದ್ದು, 250ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಈ ತಾಂಡಾದಲ್ಲಿ ಕಳೆದ 6 ತಿಂಗಳಿನಿಂದ ವಿದ್ಯುತ್ ಸಂಪರ್ಕವಿಲ್ಲದೇ ನಿತ್ಯವೂ ಜನರು ಹಾವು ಚೇಳುಗಳ ಭಯದಲ್ಲಿ ಕಾಲ ಕಳೆಯುವಂತಾಗಿದೆ.

ವಿದ್ಯುತ್ ಸಮಸ್ಯೆ ಉಂಟಾಗಿದ್ದರಿಂದ ತಂಡದಲ್ಲಿನ ಅನೇಕ ಜನ ವಿದ್ಯಾರ್ಥಿಗಳು ಶಿಕ್ಷಣದಿಂದಲೂ ವಂಚಿತರಾಗಿ ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಸರಕಾರ ಆನ್​ಲೈನ್​ ಶಿಕ್ಷಣ ಆರಂಭಿಸಿದೆ. ಆದರೆ, ನಮ್ಮ ತಾಂಡಾದಲ್ಲಿ ವಿದ್ಯುತ್ ಇಲ್ಲದ್ದರಿಂದ ಯಾವುದೇ ಮೊಬೈಲ್​ಗಳು ಚಾರ್ಜ್ ಮಾಡಲಾಗದೇ ತರಗತಿಗೆ ಅಟೆಂಡ್​ ಆಗಲು ಕಷ್ಟವಾಗುತ್ತಿದೆ. ಆದರೆ, ಶಿಕ್ಷಕರು ತರಗತಿ ವೀಕ್ಷಿಸುವಂತೆ ಬೈಯುತ್ತಿದ್ದಾರೆ. ಇಲ್ಲಿ ವಿದ್ಯುತ್ ಸಮಸ್ಯೆಯಿಂದ ನಾವು ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಂಡಾದ ಹಿರಿಯ ಸಕ್ರೆಪ್ಪ ಜಾಧವ್ ಮಾತನಾಡಿ, ನಮ್ಮ ತಾಂಡಾದಲ್ಲಿ ಎರಡು ತಿಂಗಳಿನಿಂದ ವಿದ್ಯುತ್ ಇಲ್ಲ. ರಾತ್ರಿಯಾದರೆ ಸೊಳ್ಳೆ, ಹುಳು- ಹುಪ್ಪಟಿಗಳ ಕಾಟ ಶುರುವಾಗುತ್ತೆ. ಜನರು ಮನೆಯಿಂದ ಹೊರಗೆ ಬರಬೇಕಾದರೆ ದೀಪ ಹಿಡಿದುಕೊಂಡೇ ಬರಬೇಕು. ಇಲ್ಲವಾದರೆ ಮನೆಗಳ ಮುಂದೆ ಬೆಂಕಿ ಕಾಯಿಸಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಕುರಿತು ಸರಕಾರ ಗಮನ ಹರಿಸಿ ಕೂಡಲೇ ವಿದ್ಯುತ್​​ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೂಲಸೌಕರ್ಯವಿಲ್ಲದೇ ಸಂಕಷ್ಟದಲ್ಲಿ ಏದಲಬಾವಿ ತಾಂಡಾದ ಜನತೆ

ಇನ್ನು ಗ್ರಾಮದ ಮಹಿಳೆ ಸೋಮಮ್ಮ ಮಾತನಾಡಿ, ತಾಂಡಾಕ್ಕೆ ಬರಲು ರಸ್ತೆಯಿಲ್ಲ. ಮಳೆ ಬಂದರೆ ರಸ್ತೆಯಲ್ಲಿ ಓಡಾಡಲಾಗುವುದಿಲ್ಲ. ಕುಡಿಯಲು ನೀರಿಲ್ಲ. ದಿನಾಲು ಕಾಲುವೆ ನೀರು ಕುಡಿಯುವ ಪರಿಸ್ಥಿತಿ ಇದೆ. ಸರಕಾರ ನಮ್ಮತ್ತ ಸ್ವಲ್ಪವೂ ಗಮನಿಸುತ್ತಿಲ್ಲ ಎಂದು ಬೇಸರದಿಂದ ನುಡಿದರು.

ಜನಪರವಾದ ಕೆಲಸದ ಬಗ್ಗೆ ಸದಾ ಗಮನಹರಿಸುವ ಶಾಸಕ ರಾಜುಗೌಡರು ಈ ತಾಂಡಾದತ್ತ ಹೆಚ್ಚಿನ ಮುತುವರ್ಜಿ ತೋರಬೇಕಿದೆ. ಸರಕಾರ ತಾಂಡಾ ಅಭಿವೃದ್ಧಿ ನಿಗಮ ಮಾಡಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇದೆ. ಅಲ್ಲದೇ ಸರ್ಕಾರ ಇಂತಹ ಕುಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಜನರಿಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ.

Last Updated : Aug 19, 2020, 3:05 PM IST

ABOUT THE AUTHOR

...view details