ಕರ್ನಾಟಕ

karnataka

ETV Bharat / state

ಕೇಕ್ ಬದಲು ಕಲ್ಲಂಗಡಿ ಕತ್ತರಿಸಿ ಹೊಸ ವರ್ಷಾಚರಣೆ - ಕೇಕ್ ಬದಲು ಕಲ್ಲಂಗಡಿ ಕತ್ತರಿಸಿ ಹೊಸ ವರ್ಷದ ಸಂಭ್ರಮವನ್ನು ಆಚರಿಸಿದ ಯಾದಗಿರಿ ಜನ

ಹೊಸವರ್ಷದ ಸ್ವಾಗತಕ್ಕೆ ಕ್ಷಣಗಣನೆಯಾಗುತ್ತಿದ್ದು, ಯಾದಗಿರಿ ನಗರದಲ್ಲಿಂದು ಸ್ಥಳೀಯರು ವಿಭಿನ್ನವಾಗಿ ಹೊಸ ವರ್ಷದ ಆಚರಣೆಗೆ ಮುಂದಾಗಿದ್ದಾರೆ.

new-year-celebration-of-cutting-watermelon-instead-of-cake-in-yadagiri
ಹೊಸ ವರ್ಷದ ಸಂಭ್ರಮ...ಕೇಕ್ ಬದಲು ಕಲ್ಲಂಗಡಿ ಕತ್ತರಿಸಿ ಆಚರಣೆ..

By

Published : Dec 31, 2019, 7:20 PM IST

ಯಾದಗಿರಿ:ನೂತನ ವರ್ಷದ ಆರಂಭಕ್ಕೂ ಮುನ್ನವೇ ನಗರದಲ್ಲಿ ವಿನೂತನವಾಗಿ ಹೊಸ ವರ್ಷದ ಸಂಭ್ರಮ ಆಚರಿಸಲಾಯಿತು.

ನಗರದ ಜಿಲ್ಲಾ ಟೋಕರಿ ಕಬ್ಬಲಿಗ ಸಮಾಜದ ಕಚೇರಿಯಲ್ಲಿ ಟೋಕರಿ ಕಬ್ಬಲಿಗ ಸಮಾಜದ ಮುಖಂಡ ಉಮೇಶ ಮುದ್ನಾಳ ಅವರು ರೈತಪರ ಕಾಳಜಿ ವಹಿಸಿ ಕೇಕ್ ಕತ್ತರಿಸುವ ಬದಲು ಕಲ್ಲಂಗಡಿ ಕತ್ತರಿಸಿ ಹೊಸ ವರ್ಷದ ಸಂಭ್ರಮವನ್ನು ಆಚರಿಸಿದರು. ಕಲ್ಲಂಗಡಿ ಹಣ್ಣು ಕತ್ತರಿಸಿ ಪರಸ್ಪರ ಸೇವನೆ ಮಾಡಿದರು.

ಹೊಸ ವರ್ಷದ ಸಂಭ್ರಮ...ಕೇಕ್ ಬದಲು ಕಲ್ಲಂಗಡಿ ಕತ್ತರಿಸಿ ಆಚರಣೆ..

ಈ ವೇಳೆ ಪ್ರತಿಯೊಬ್ಬರು ಮದ್ಯ ಸೇವನೆ ಹಾಗೂ ಕೇಕ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳದೆ ರೈತರಿಗೆ ಉತ್ತೇಜನ ನೀಡಲು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡಿ, ಅದನ್ನು ತಿನ್ನುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ABOUT THE AUTHOR

...view details