ಸುರಪುರ: ಭಾರತ ಲಾಕ್‌ಡೌನ್ ಆದ ಹಿನ್ನೆಲೆ ನಗರದಲ್ಲಿ ಸಂಪೂರ್ಣ ಬಂದ್ ಆಚರಿಸಲಾಗುತ್ತಿದೆ. ಸರ್ಕಾರ ದಿನಸಿ, ಔಷಧಿಗಳು ಮತ್ತು ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಇದರಿಂದ ಜನಸಂದಣಿ ಉಂಟಾಗುತ್ತಿದೆ. ಹಾಗಾಗಿ ಕಿರಾಣಿ ಮತ್ತು ತರಕಾರಿ ಮಾರಾಟಕ್ಕೂ ಪೊಲೀಸ್ ಇಲಾಖೆ ಮತ್ತು ನಗರಸಭೆಯಿಂದ ನಿಯಮ ರೂಪಿಸಲಾಗಿದೆ.
ದಿನಸಿ ಸಾಮಾನು ಮತ್ತು ತರಕಾರಿ, ಹಣ್ಣು ಖರೀದಿಗೆಂದು ನೂರಾರು ಜನ ಸೇರುವುದರಿಂದ ಸಮಸ್ಯೆಯಾಗುತ್ತಿದೆ. ಇದಕ್ಕಾಗಿ ನಿಯಮ ರೂಪಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಜೀವನ ಕುಮಾರ್ ಕಟ್ಟಿಮನಿ ಹೇಳಿದರು. ನಗರದಲ್ಲಿರುವ ಕಿರಾಣಿ ಅಂಗಡಿಗಳ ಮುಂದೆ ಜನ ಸೇರುವುದರಿಂದ ಕೊರೊನಾ ಸೊಂಕು ತಗುಲಬಹುದೆಂದು ನಗರದಾದ್ಯಂತ ಕೆಲವೇ ಕಿರಾಣಿ ಅಂಗಡಿ ಇಂದು, ನಾಳೆ ಮಾತ್ರ ತೆರೆಯಲು ಕ್ರಮ ವಹಿಸಲಾಗಿದೆ.