ಕರ್ನಾಟಕ

karnataka

ETV Bharat / state

ಯಾದಗಿರಿ: ಮುಳ್ಳಿನ ಕಂಟಿಯಲ್ಲಿ ನವಜಾತ ಗಂಡು ಶಿಶು ಪತ್ತೆ - ನವಜಾತ ಶಿಶು

ಯಾದಗಿರಿಯ ಮುಂಡರಗಿ ಗ್ರಾಮದ ಬಳಿ ಇರುವ ನಿರ್ಜನ ಪ್ರದೇಶದ ಮುಳ್ಳು ಕಂಟೆಯಲ್ಲಿ ಒಂದು ದಿನ ಗಂಡು ನವಜಾತ ಶಿಶು ಎಸೆಯಲಾಗಿದೆ. ನವಜಾತ ಶಿಶುವಿನ ರೋಧನೆ ಅರಿತ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ಶಿಶು ಇರುವುದು ಬೆಳಕಿಗೆ ಬಂದಿದೆ.

new born baby
ನವಜಾತ ಗಂಡು ಶಿಶು ಪತ್ತೆ

By

Published : Sep 25, 2020, 3:38 AM IST

ಯಾದಗಿರಿ:ಜಿಲ್ಲೆಯ ಮುಂಡರಿಗಿ ಗ್ರಾಮದ ಬಳಿ ಮುಳ್ಳಿನ ಕಂಟಿಯಲ್ಲಿ ನವಜಾತ ಗಂಡು ಶಿಶು ಎಸೆದು ಹೋದ ಅಮಾನವೀಯ ಘಟನೆ ನಡೆದಿದೆ.

ಮುಂಡರಗಿ ಗ್ರಾಮದ ಬಳಿ ಇರುವ ನಿರ್ಜನ ಪ್ರದೇಶದ ಮುಳ್ಳು ಕಂಟೆಯಲ್ಲಿ ಒಂದು ದಿನ ಗಂಡು ನವಜಾತ ಶಿಶು ಎಸೆಯಲಾಗಿದೆ. ನವಜಾತ ಶಿಶುವಿನ ರೋಧನೆ ಅರಿತ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ಶಿಶು ಇರುವುದು ಬೆಳಕಿಗೆ ಬಂದಿದೆ.

ಈ ಕುರಿತು ಗ್ರಾಮಸ್ಥರು ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವನ್ನ ರಕ್ಷಿಸಿದ್ದಾರೆ. ಯಾದಗಿರಿ ಜಿಲ್ಲಾಸ್ಪತ್ರೆಯ ಮಕ್ಕಳ ವಿಶೇಷ ಘಟಕದಲ್ಲಿ ಶಿಶುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನವಜಾತ ಗಂಡು ಶಿಶು ಅಂದಾಜು 1.5 ಕೆ.ಜಿ. ತೂಕವಿದೆ. ಮಗುವು ಆರೋಗ್ಯ ಸುಧಾರಿಸುತ್ತಿದೆ. ಮಗು ಯಾರದು ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ABOUT THE AUTHOR

...view details