ಕರ್ನಾಟಕ

karnataka

ETV Bharat / state

ಸುರಪುರ: ಹಾಡಹಗಲೇ ಚಿನ್ನದಂಗಡಿ ಮಾಲೀಕನ ಪುತ್ರನ ಬರ್ಬರ ಹತ್ಯೆ - ಚಿನ್ನದಂಗಡಿ ಮಾಲೀಕನ ಪುತ್ರನ ಕೊಲೆ

ಸುರಪುರ ಪಟ್ಟಣದಲ್ಲಿ ಚಿನ್ನದಂಗಡಿ ಮಾಲೀಕರ ಪುತ್ರನನ್ನು ಹತ್ಯೆ ಮಾಡಿದ್ದು, ಹಣದಾಸೆಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗ್ತಿದೆ. ಚಿನ್ನದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Murder of Jewelry shop owner Son in Surapura
ಸುರಪುರ: ಹಾಡಹಗಲೇ ಚಿನ್ನದಂಗಡಿ ಮಾಲೀಕರ ಪುತ್ರನ ಬರ್ಬರ ಹತ್ಯೆ

By

Published : Jan 13, 2021, 5:40 PM IST

Updated : Jan 13, 2021, 6:40 PM IST

ಸುರಪುರ (ಯಾದಗಿರಿ): ಇಲ್ಲಿನ ಹುಣಸಗಿ ಪಟ್ಟಣದ ಧನಲಕ್ಷ್ಮಿ ಜುವೆಲ್ಲರ್ಸ್​​ನ ಮಾಲೀಕರಾದ ಜಗದೀಶ್ ಶಿರವಿ ಎಂಬುವರ ಪುತ್ರ ನರೇಂದ್ರ (22) ಎಂಬಾತನನ್ನು ಹಾಡ ಹಗಲಲ್ಲೆ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಹಾಡಹಗಲೇ ಚಿನ್ನದಂಗಡಿ ಮಾಲೀಕನ ಪುತ್ರನ ಬರ್ಬರ ಹತ್ಯೆ

ಚಿನ್ನದಂಗಡಿ ಮಾಲೀಕರ ಮನೆಯಲ್ಲಿದ್ದ 5 ತೊಲ ಬಂಗಾರ ಹಾಗೂ 2 ಲಕ್ಷ ರೂಪಾಯಿಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗುತ್ತಿದೆ. ಚಿನ್ನದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಎಂಬ ಯುವಕ ಕೊಲೆಯಾದಾಗಿನಿಂದಲೂ ನಾಪತ್ತೆಯಾಗಿದ್ದು, ಆತ ಅಪಹರಣವಾಗಿರಬಹುದು ಎನ್ನಲಾಗುತ್ತಿದೆ. ಅಲ್ಲದೆ ಕಿಶೋರ್ ಎಂಬಾತನೇ ಹಣದಾಸೆಗಾಗಿ ಚಿನ್ನದಂಗಡಿ ಮಾಲೀಕನ ಪುತ್ರನನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಪ್ರಕರಣ ಸಂಬಂಧ ಹುಣಸಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ವಿಜಯಪುರದಲ್ಲಿ ನಾಲ್ವರು ಕೊಲೆ ಆರೋಪಿಗಳ ಬಂಧನ

Last Updated : Jan 13, 2021, 6:40 PM IST

ABOUT THE AUTHOR

...view details