ಸುರಪುರ (ಯಾದಗಿರಿ): ಅನೈತಿಕ ಸಂಬಂಧ ಹೊಂದಿದ್ದ ಆರೋಪ ಹೊರಿಸಿ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ದೇವಿಕೆರಾ ಗ್ರಾಮದಲ್ಲಿ ನಡೆದಿದೆ.
ಅನೈತಿಕ ಸಂಬಂಧ ಆರೋಪ: ವ್ಯಕ್ತಿಯ ಬರ್ಬರ ಕೊಲೆ - Yadgiri
ಅನೈತಿಕ ಸಂಬಂಧ ಹೊಂದಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಸುರಪುರದ ದೇವಿಕೆರಾ ಗ್ರಾಮದಲ್ಲಿ ನಡೆದಿದೆ.
ವ್ಯಕ್ತಿಯ ಬರ್ಬರ ಕೊಲೆ
ಯಂಕಪ್ಪ ತಂದೆ ಭೀಮಣ್ಣ ಬೇವಿನಗಿಡ (35) ಕೊಲೆಯಾದ ವ್ಯಕ್ತಿ. ಯಂಕಪ್ಪ ಮಂಗಳವಾರ ರಾತ್ರಿ ಮನೆಯ ಛಾವಣಿ ಮೇಲೆ ಮಲಗಿದ್ದ. ಈ ವೇಳೆ ರಾತ್ರಿ ಸುಮಾರು 12 ಗಂಟೆಗೆ ಅಲ್ಲಿಗೆ ಆಗಮಿಸಿದ ಶಿವಪ್ಪ, ಆತನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಠಾಣೆಗೆ ಬಂದು ಶರಣಾಗಿದ್ದಾನೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸುರಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.