ಯಾದಗಿರಿ: ಮಹಾರಾಷ್ಟ್ರ ಸೇರಿದಂತೆ ಕಲಬುರಗಿಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ, ಯಾದಗಿರಿ ನಗರಸಭೆ ಫುಲ್ ಅಲರ್ಟ್ ಆಗಿದೆ. ನಗರದ ಪ್ರಮುಖ ರಸ್ತೆಯಲ್ಲಿ ನಿಂತು ಮಾಸ್ಕ್ ಬಗ್ಗೆ ಅಧಿಕಾರಿಗಳು ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಮಾಸ್ಕ್ ಧರಿಸದವರಿಗೆ ದಂಡ: ಮುಖಗವಸು ನೀಡಿ ಬುದ್ಧಿ ಹೇಳಿದ ನಗರಸಭೆ ಕಮಿಷನರ್ - ಮುಖಗವಸು ,
ಜಿಲ್ಲಾಡಳಿತ ಆದೇಶದ ಮೇರೆಗೆ ಫೀಲ್ಡ್ಗಿಳಿದಿರುವ ನಗರಸಭೆ ಕಮಿಷನರ್ ಬಿ ಟಿ ನಾಯಕ್, ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿರುವವರ ವಾಹನ ನಿಲ್ಲಿಸಿ ದಂಡ ಜಡಿದರು. ಬಳಿಕ ತಮ್ಮ ಕೈಯಿಂದಲೇ ಮಾಸ್ಕ್ ತೊಡಿಸಿ ಅರಿವು ಮೂಡಿಸಿದ್ದಾರೆ.
ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಮಾಸ್ಕ್ ನೀಡಿದ ನಗರಸಭೆ
ಮಾಸ್ಕ್ ಧರಿಸದೇ ರಸ್ತೆಗಿಳಿಯುತ್ತಿರುವವರಿಗೆ 100 ರೂಪಾಯಿ ದಂಡ ವಿಧಿಸುತ್ತಿರುವುದಲ್ಲದೆ, ನಗರಸಭೆ ವತಿಯಿಂದ ಮಾಸ್ಕ್ ವಿತರಿಸಲಾಗುತ್ತಿದೆ. ಜಿಲ್ಲಾಡಳಿತ ಆದೇಶದ ಮೇರೆಗೆ ಫೀಲ್ಡ್ಗಿಳಿದಿರುವ ನಗರಸಭೆ ಕಮಿಷನರ್ ಬಿ ಟಿ ನಾಯಕ್, ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿರುವವರ ವಾಹನ ನಿಲ್ಲಿಸಿ, ಜನರಿಗೆ ತಮ್ಮ ಕೈಯಿಂದ ಮಾಸ್ಕ್ ತೊಡಿಸಿದ್ದಾರೆ. ಜೊತೆಗೆ ಕೊರೊನಾ 2ನೇ ಅಲೆಯ ಬಗ್ಗೆ ಮುಂಜಾಗ್ರತಾ ಕ್ರಮಗಳ ವಹಿಸುವಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ:ಮಹಾ ಗಡಿಯಲ್ಲಿ ಹೆಸರಿಗೆ ಮಾತ್ರ ಚೆಕ್ಪೋಸ್ಟ್.. ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಕೊರೊನಾ ಹೆಚ್ಚುವ ಭೀತಿ