ಗುರುಮಠಕಲ್ :ದೇವರ ಮುಂದೆ ಹಚ್ಚಿದ್ದ ದೀಪದ ಕಿಡಿ ಬಟ್ಟೆಗೆ ತಗುಲಿ ₹90 ಸಾವಿರಕ್ಕೂ ಅಧಿಕ ನಗದು, ಶಾಲಾ ದಾಖಲೆಗಳು ಸುಟ್ಟು ಭಸ್ಮವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ದೇವರ ಮುಂದೆ ಹಚ್ಚಿದ್ದ ದೀಪದ ಕಿಡಿ ತಗುಲಿ ₹90 ಸಾವಿರ ನಗದು, ದಾಖಲೆಗಳು ಭಸ್ಮ.. - ಗುರುಮಠಕಲ್ ಲೇಟೆಸ್ಟ್ ನ್ಯೂಸ್
ಅಲಮೇರದಲ್ಲಿದ್ದ ಸುಮಾರು ₹90 ಸಾವಿರ ನಗದು, ಶಾಲಾ ದಾಖಲೆಗಳು, 30 ಗ್ರಾಂ ಚಿನ್ನ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಇದರಿಂದ ಬಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ..
ಪಟ್ಟಣದ ಮಲ್ಲಯ್ಯಕಟ್ಟ ಓಣಿಯ ನಿವಾಸಿ ಯಲ್ಲಮ್ಮ ಬಚ್ಚಂ ಎಂಬುವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆ ಯಜಮಾನಿ ಯಲ್ಲಮ್ಮ ಬೆಳಗ್ಗೆ ದೇವರ ಮುಂದೆ ದೀಪ ಹಚ್ಚಿ ಹೊಲಕ್ಕೆ ತೆರಳಿದ್ದರು. ಈ ವೇಳೆ ಗಾಳಿಯಿಂದ ದೀಪದ ಕಿಡಿ ಪಕ್ಕದಲ್ಲಿದ್ದ ಬಟ್ಟೆಗೆ ತಗುಲಿ ಬಳಿಕ ಅಲಮೇರದಲ್ಲಿದ್ದ ಬಟ್ಟೆಗಳಿಗೂ ತಗುಲಿದೆ.
ಪರಿಣಾಮ ಅಲಮೇರದಲ್ಲಿದ್ದ ತೊಗರಿ ಮಾರಿ ತಂದಿದ್ದ ಸುಮಾರು ₹90 ಸಾವಿರ ನಗದು, ಶಾಲಾ ದಾಖಲೆಗಳು, 30 ಗ್ರಾಂ ಚಿನ್ನ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಇದರಿಂದ ಬಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಹಣಮಂತ ಬಂಕಲಿಗಿ, ಕಂದಾಯ ಇಲಾಖೆಯ ವಿಜಯ್ ಕುಮಾರ್ ಪವಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.