ಯಾದಗಿರಿ:ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾದ್ರೂ ಕೂಡ ಜಮೀನಿನಲ್ಲಿ ಬಿತ್ತಿದ ಬೀಜ ನಾಟಿಯಾಗದೆ ಬೀಜ ನಶಿಸಿ ಹೋಗುತ್ತಿದೆ ಎಂದು ರೈತ ಕಣ್ಣೀರಿಡುತ್ತಿದ್ದಾನೆ.
ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಾಳ ಗ್ರಾಮದ ರೈತ ತನ್ನ ಜಮೀನಿನಲ್ಲಿ ಬಿತ್ತಿದ ಬೀಜ ನಾಟಿಯಾಗದಿರುವುದಕ್ಕೆ ಅಸಮಾಧಾನಗೊಂಡು ಮಳೆಯ ಮೊರೆ ಹೋಗಿದ್ದಾನೆ. ಈ ಬಾರಿ ಜಿಲ್ಲೆಯಲ್ಲಿ ಜೂನ್ನಿಂದ ಪ್ರಾರಂಭವಾಗಬೇಕಿದ್ದ ಮುಂಗಾರು ಮಳೆ ಬಾರದ ಪರಿಣಾಮ ಬಿತ್ತನೆ ಮಾಡಿದ ಬೀಜ ನಾಟಿಯಾಗಿಲ್ಲ. ಆಗಸ್ಟ್ ತಿಂಗಳಲ್ಲಿ ಪುಷ್ಯ ಮಳೆಯು ಇದ್ದ ಕಾರಣ ಮಳೆ ಹೆಚ್ಚಾಗಿ ಬಂದಿಲ್ಲ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.