ಸುರಪುರ(ಯಾದಗಿರಿ):ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಮೊಹರಂ ಹಬ್ಬವನ್ನು ಸುರಪುರ ತಾಲೂಕಿನಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಸುರಪುರ : ಸಡಗರ-ಸಂಭ್ರಮದಿಂದ ಮೊಹರಂ ಹಬ್ಬ ಆಚರಣೆ - Surapur news
ಮೊಹರಂ ಹಬ್ಬವನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗಿದ್ದು, ಮೊಹರಂ ಆಚರಣೆಯಲ್ಲಿ ಮೈಮರೆತ ಜನರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದರು..
ಸುರಪುರ: ಸಡಗರ-ಸಂಭ್ರಮದಿಂದ ಮೊಹರಂ ಹಬ್ಬ ಆಚರಣೆ
ಐದು ದಿನಗಳ ಹಬ್ಬದ ಕೊನೆಯ ದಿನವಾದ ಇಂದು, ಹಸನ್‌ಸಾಬ್, ಹುಸೇನ್‌ಸಾಬ್, ಚಂದ್ರಾಮ, ಪೀರ್ ಎಲ್ಲಾ ದೇವರುಗಳ ಮೆರವಣಿಗೆಯೊಂದಿಗೆ ರಾತ್ರಿ 11 ಗಂಟೆಗೆ ದಫನ್ ಮುಗಿಸುತ್ತಾರೆ. ಸುರಪುರದ ರಂಗಂಪೇಟೆಯ ನಾಗೇಂದ್ರರಾವ್ ಜುಜಾರೆ ಅವರ ಮನೆಯಲ್ಲಿ ಮೂರು ತಲೆ ಮಾರುಗಳಿಂದ ಮೊಹರಂ ಆಚರಿಸುತ್ತಾ ಬಂದಿದ್ದಾರೆ.
ಮೊಹರಂ ಆಚರಣೆಯಲ್ಲಿ ಮೈಮರೆತ ಜನರು ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.