ಸುರಪುರ: ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಹೋಗಿದ್ದ ಸುರಪುರ ಹಾಗೂ ಹುಣಸಗಿ ತಾಲೂಕಿನ ಜನರು ಮರಳಿ ತಮ್ಮ ಊರಿಗೆ ಬರಲಾಗದೇ ತೊಂದರೆಗೆ ಸಿಲುಕಿದ್ದರು. ಅವರನ್ನು ಕರೆತರುವ ಮೂಲಕ ಶಾಸಕ ನರಸಿಂಹ ನಾಯಕ ರಾಜುಗೌಡ ಮಾನವೀಯತೆ ಮೆರೆದಿದ್ದಾರೆ.
ಗುಳೆ ಹೋಗಿದ್ದ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ ಶಾಸಕ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರಲಿರುವ ಬಸ್‌ಗಳ ಟಿಕೆಟ್ ದರ ದುಪ್ಪಟ್ಟುಗೊಳಿಸಿದ್ದರಿಂದ ತೀವ್ರ ಚಿಂತೆಗೀಡಾಗಿದ್ದ ಕಾರ್ಮಿಕರ ನೋವನ್ನು ಅರಿತ ಶಾಸಕರು, ಬಸ್ ದರದ ಹಣವನ್ನು ಸ್ವತಃ ತಾವೇ ಭರಿಸಿ 9 ಬಸ್‌ಗಳ ಮೂಲಕ ಅವರನ್ನು ಕರೆತಂದಿದ್ದಾರೆ.
ಬಸ್ ದರದ ಹಣವನ್ನು ರಾಜುಗೌಡರು ನೀಡಿದ್ದು ಎಲ್ಲರನ್ನೂ ಉಚಿತವಾಗಿ ಕರೆದೊಯ್ಯಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಂತಸಗೊಂಡ ಗುಳೆ ಕಾರ್ಮಿಕರು ಜಯಘೋಷ ಮೊಳಗಿಸಿದರು.
ಗುಳೆ ಹೋಗಿದ್ದ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ ಶಾಸಕ ಶಾಸಕರ ಮಾರ್ಗದರ್ಶನದಲ್ಲಿ ಎರಡು ದಿನಗಳಕಾಲ ಮಹಾರಾಷ್ಟ್ರ ಚೆಕ್‌ಪೋಸ್ಟ್‌ಗಳಲ್ಲಿ ಉಳಿದುಕೊಂಡು ನಿಪ್ಪಾಣಿ ಬಸ್ ಘಟಕಕ್ಕೆ ಹಣ ತುಂಬಿಸಲು ಶ್ರಮಿಸಿದ ತಾಲೂಕಿನ ಮೋತಿಲಾಲ್ ಚವ್ಹಾಣ್ ಮತ್ತು ಮಲ್ಲಿಕಾರ್ಜುನ ರೆಡ್ಡಿ ಕೋಳಿಹಾಳ ಮತ್ತವರ ತಂಡದ ಶ್ರಮಕ್ಕೆ ತಾಲೂಕಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.