ಯಾದಗಿರಿ: ಹೆಚ್ ಡಿ ಕುಮಾರಸ್ವಾಮಿಯವರು ಜನರ, ಶಾಸಕರ ಮನಸ್ಸು ಗೆದ್ದಿದ್ರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಸುರಪುರ ಶಾಸಕ ರಾಜುಗೌಡ ಅಭಿಪ್ರಾಯಪಟ್ಟಿದ್ದಾರೆ.
ಜನರ, ಶಾಸಕರ ಮನಸ್ಸು ಗೆದ್ದಿದ್ರೆ ಹೆಚ್ಡಿಕೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ: ಶಾಸಕ ರಾಜುಗೌಡ - ಹೆಚ್ಡಿಕೆ ವಿರುದ್ಧ ಶಾಸಕ ರಾಜುಗೌಡ ಹೇಳಿಕೆ
ಭಯೋತ್ಪಾದಕರ, ನಕ್ಸಲ್ರ ಫೋನ್ ಟ್ಯಾಪ್ ಮಾಡಬೇಕಿತ್ತು. ಆದ್ರೆ ರಾಜಕೀಯ ಸ್ವಾರ್ಥಕ್ಕಾಗಿ ತಮ್ಮದೇ ಸಮುದಾಯದ ಪ್ರಸನ್ನಾಂದಪುರಿ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಿಸಿರುವದು ಸರಿಯಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಕುರಿತು ಶಾಸಕ ರಾಜುಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಕಾಲಾವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಟ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಡಿಕೆ ಫೋನ್ ಟ್ಯಾಪ್ ಮಾಡಿಸುವ ಬದಲು ಜನರ ಸಮಸ್ಯೆಗಳನ್ನ ಟ್ಯಾಪ್ ಮಾಡಬೇಕಿತ್ತು. ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಕದ್ದಾಲಿಕೆ ಮಾಡಿದ್ದಾರೆ. ಆದರೂ ಸರ್ಕಾರ ಉಳಿಯಲಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಸಿಬಿಐ ತನಿಖೆಯಿಂದ ಸತ್ಯ ಬೆಳಕಿಗೆ ಬರುತ್ತದೆ ಎಂದರು.
ಅಂದಿನ ಸಮ್ಮಿಶ್ರ ಸರ್ಕಾರ ಭಯೋತ್ಪಾದಕರ, ನಕ್ಸಲ್ರ ಫೋನ್ ಟ್ಯಾಪ್ ಮಾಡಬೇಕಿತ್ತು. ಆದ್ರೆ ರಾಜಕೀಯ ಸ್ವಾರ್ಥಕ್ಕಾಗಿ ತಮ್ಮದೇ ಸಮುದಾಯದ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.