ಯಾದಗಿರಿ:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಿಎಂ ಅವಧಿ ಮುಗಿದ ಬಳಿಕ ರಾಜ್ಯದಲ್ಲಿ ದಲಿತ ಸಿಎಂ ಆಗಲಿದ್ದಾರೆ ಅಂತ ಸುರಪುರ ಶಾಸಕ ರಾಜುಗೌಡ ಹೇಳಿಕೆ ನೀಡಿದ್ದಾರೆ.
ದಲಿತರು ಸಿಎಂ ಆಗ್ಬೇಕಾದ್ರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ: ಶಾಸಕ ರಾಜುಗೌಡ ಹೇಳಿಕೆ - ದಲಿತರು ಸಿಎಂ ಆಗ್ಬೆಕಾದ್ರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ: ಶಾಸಕ ರಾಜುಗೌಡ ಹೇಳಿಕೆ
ಯಡಿಯೂರಪ್ಪ ಅವರ ಅವಧಿ ಬಳಿಕ ರಾಜ್ಯದಲ್ಲಿ ಬಿಜೆಪಿಯಿಂದ ದಲಿತರಿಗೆ ಸಿಎಂ ಸ್ಥಾನ ಸಿಗಲಿದೆ. ಬಿಜೆಪಿ ಪಕ್ಷದಿಂದನೆ ದಲಿತರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಶಾಸಕ ರಾಜುಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
![ದಲಿತರು ಸಿಎಂ ಆಗ್ಬೇಕಾದ್ರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ: ಶಾಸಕ ರಾಜುಗೌಡ ಹೇಳಿಕೆ MLA Raju Gowda](https://etvbharatimages.akamaized.net/etvbharat/prod-images/768-512-5685319-thumbnail-3x2-ydr.jpg)
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಯಡಿಯೂರಪ್ಪ ಹೆಸರಲ್ಲಿ ಶಾಸಕರಾಗಿದ್ದೇವೆ. ಯಡಿಯೂರಪ್ಪ ಅವರ ಅವಧಿ ಬಳಿಕ ರಾಜ್ಯದಲ್ಲಿ ಬಿಜೆಪಿಯಿಂದ ದಲಿತರು ಸಿಎಂ ಆಗಲಿದ್ದಾರೆ. ಬಿಜೆಪಿ ಪಕ್ಷದಿಂದನೆ ದಲಿತರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ. ಕಾಂಗ್ರೆಸ್ ಪಕ್ಷ ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದು ಅವರ ಅಭಿವೃದ್ಧಿ ಮಾಡಿಲ್ಲ ಅಂತ ಕಾಂಗ್ರೆಸ್ ಪಕ್ಷದ ವಿರುದ್ಧ ಶಾಸಕ ರಾಜುಗೌಡ ಹರಿಹಾಯ್ದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಾಕಷ್ಟು ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಆದ್ರೆ, ಅವರನ್ನು ಕಾಂಗ್ರೆಸ್ ಪಕ್ಷ ಸಿಎಂ ಮಾಡಲಿಲ್ಲ. ಬಹುಮತವಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ದಲಿತರಿಗೆ ಡಿಸಿಎಂ ಸ್ಥಾನ ಸಹ ಕೊಟ್ಟಿಲ್ಲ. ಅನಿವಾರ್ಯ ಅಂತ ಸಮ್ಮಿಶ್ರ ಸರ್ಕಾರದಲ್ಲಿ ಪರಮೇಶ್ವರ್ ಅವರಿಗೆ ಡಿಸಿಎಂ ಮಾಡಿದ್ದರು. ನಮ್ಮ ಸರ್ಕಾರದಲ್ಲಿ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಸ್ಥಾನ ನೀಡಲಾಗಿದೆ. ಬಿಜೆಪಿ ಪಕ್ಷದಿಂದನೇ ದಲಿತ ಸಿಎಂ ಆಗ್ತಾರೆ ಬರೆದಿಟ್ಟುಕೊಳ್ಳಿ ಅಂತ ತಿಳಿಸಿದ್ದಾರೆ.