ಯಾದಗಿರಿ:ಪ್ರಿಯಾಂಕ್ ಖರ್ಗೆ (MLA Priyank Kharge) ಅವರು ತಮ್ಮ ತಂದೆ ಮಾಡಿದ ಕೆಲಸ ಮರೆತಿದ್ದಾರೆ. ಅವರ ತಂದೆಯವರು ವಿವಿಧ ಖಾತೆ ನಿರ್ವಹಿಸಿದ್ದು, ಅವರನ್ನೇ ಕೇಳಿ ತಿಳಿದುಕೊಳ್ಳಿ. ನೀವು ಒಂದು ಬೆರಳು ತೋರಿಸಿದರೆ, ಇತರ ನಾಲ್ಕು ಬೆರಳುಗಳು ನಿಮ್ಮ ಕಡೆಗೇ ತೋರುತ್ತವೆ, ಆರೋಪ ಮಾಡುವ ಮುನ್ನ ಯೋಚಿಸಬೇಕು ಎಂದು ಶಾಸಕ ರಾಜೂಗೌಡ (MLA raju gowda) ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದ (bitcoin scam) ಬಗ್ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು. ಪ್ರಿಯಾಂಕ್ ಅವರು ದಯವಿಟ್ಟು ಇಲ್ಲ ಸಲ್ಲದ ಹೇಳಿಕೆ ಕೊಡಬೇಡಿ. ಸುಮ್ಮನೆ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಮಾಡುವ ಮುನ್ನ ನಿಮ್ಮ ತಂದೆಯವರಿಗೆ ಕೇಳಿ ತಿಳಿದುಕೊಳ್ಳಿ, ಆ ಮೇಲೆ ಈ ಬಗ್ಗೆ ಹೇಳಿಕೆ ನೀಡಿ ಎಂದು ತಿಳಿಸಿದರು.
ಕಾಂಗ್ರೆಸ್ನವರಿಗೆ ಬಿಟ್ ಕಾಯಿನ್ (bitcoin issue) ಬಗ್ಗೆ ಸರಿಯಾಗಿ ಗೊತ್ತಿಲ್ಲ. ಆದರೆ, ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರಿಗೆ ರಾಜ್ಯ ಸರ್ಕಾರದ ಯಾವುದೇ ತಪ್ಪು ಕಂಡು ಬಂದಿಲ್ಲ, ಹೀಗಾಗಿ ಬಿಟ್ ಕಾಯಿನ್ ನೆಪವಿಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.