ಸುರಪುರ:ತಾಲೂಕಿನಿಂದ ದುಡಿಯಲೆಂದು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಗುಳೆ ಹೋದವರನ್ನು ಕರೆ ತರುವ ಕಾರ್ಯಕ್ಕೆ ನಾಳೆಯಿಂದ ಚಾಲನೆ ಸಿಗಲಿದೆ ಎಂದು ಶಾಸಕ ನರಸಿಂಹ ನಾಯಕ ರಾಜುಗೌಡ ತಿಳಿಸಿದ್ದಾರೆ.
ಮಹಾರಾಷ್ಟ್ರ, ಗೋವಾಕ್ಕೆ ಹೋದವರನ್ನು ಕರೆ ತರುವ ಕಾರ್ಯಕ್ಕೆ ನಾಳೆಯಿಂದ ಚಾಲನೆ: ಶಾಸಕ ರಾಜುಗೌಡ - MLA rajugowda
ಗೋವಾ ಕಡೆಯಿಂದ ಬರುವವರು ಕಾಗವಾಡ ಚೆಕ್ ಪೋಸ್ಟ್ ಮತ್ತು ಮಹಾರಾಷ್ಟ್ರ ಭಾಗದಿಂದ ಬರುವವರಿಗಾಗಿ ಕುಣಕುಂದಿ, ಕುಂಜುಗಡ ಹಾಗೂ ಸಂದುರ್ಗ ಚೆಕ್ ಪೋಸ್ಟ್‌ಗಳಲ್ಲಿ ಬಸ್‌ಗಳ ವ್ಯವಸ್ಥೆ ಇರಲಿದೆ.
ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಅವರು, ಸರ್ಕಾರದಿಂದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿರುವವರನ್ನು ಉಚಿತವಾಗಿ ಕರೆ ತರಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಗೋವಾ ಕಡೆಯಿಂದ ಬರುವವರು ಕಾಗವಾಡ ಚೆಕ್ ಪೋಸ್ಟ್ ಮತ್ತು ಮಹಾರಾಷ್ಟ್ರ ಭಾಗದಿಂದ ಬರುವವರಿಗಾಗಿ ಕುಣಕುಂದಿ, ಕುಂಜುಗಡ ಹಾಗೂ ಸಂದುರ್ಗ ಚೆಕ್ ಪೋಸ್ಟ್‌ಗಳಲ್ಲಿ ಬಸ್ ವ್ಯವಸ್ಥೆ ಇರಲಿದೆ. ಅಲ್ಲದೆ ನಮ್ಮ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಜಿಲ್ಲಾಡಳಿತದ ನೋಡಲ್ ಅಧಿಕಾರಿಗಳು ಇರಲಿದ್ದಾರೆ. ಆದ್ದರಿಂದ ನಮ್ಮ ಕ್ಷೇತ್ರದ ಜನರು ಯಾವುದೇ ಆತಂಕ ಪಡಬೇಕಿಲ್ಲ ಎಂದು ಭರವಸೆ ನೀಡಿದ್ದಾರೆ.