ಸುರಪುರ(ಯಾದಗಿರಿ): ತಾಲೂಕಿನ ಜಾಲಿಬೆಂಚಿ ಗ್ರಾಮದ ಅನೇಕ ಕುಟುಂಬಗಳು ಕೊರೊನಾ ಲಾಕ್ಡೌನ್ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕುವಂತಾಗಿದೆ. ಆಡಳಿತಾತ್ಮಕ ತೊಡಕುಗಳಿಂದ ಇದುವರೆಗೆ ಪರ ರಾಜ್ಯದಲ್ಲಿರುವವರನ್ನು ಕರೆತರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಅಂತಹವರನ್ನು ಮರಳಿ ರಾಜ್ಯಕ್ಕೆ ಕರೆತರುವ ಭರವಸೆಯನ್ನು ಶಾಸಕ ರಾಜುಗೌಡ ನೀಡಿದ್ದಾರೆ.
20ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಕರೆತರುವ ಭರವಸೆ ನೀಡಿದ ಶಾಸಕ ರಾಜುಗೌಡ - Yadagiri Lockdown News
ಜಾಲಿಬೆಂಚಿ ಗ್ರಾಮದ ನಾಲ್ಕೈದು ಕುಟುಂಬಗಳ 20ಕ್ಕೂ ಹೆಚ್ಚು ಜನ ಸೋಲಾಪುರದಲ್ಲಿ ಲಾಕ್ಡೌನ್ನಿಂದಾಗಿ ಸಿಲುಕಿದ್ದು, ಶಾಸಕರು ತಮ್ಮನ್ನು ಕರೆದುಕೊಂಡು ಹೋಗುವಂತೆ ವಿನಂತಿಸಿದ್ದಾರೆ.
20ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಕರೆತರುವ ಭರವಸೆ ನೀಡಿದ ಶಾಸಕ ರಾಜುಗೌಡ
ಜಾಲಿಬೆಂಚಿ ಗ್ರಾಮದ ನಾಲ್ಕೈದು ಕುಟುಂಬಗಳ 20ಕ್ಕೂ ಹೆಚ್ಚು ಜನ ಸೋಲಾಪುರದಲ್ಲಿ ಲಾಕ್ಡೌನ್ನಿಂದಾಗಿ ಸಿಲುಕಿದ್ದು, ಶಾಸಕರು ತಮ್ಮನ್ನು ಕರೆದುಕೊಂಡು ಹೋಗುವಂತೆ ವಿನಂತಿಸಿದ್ದಾರೆ.
ಈ ಕಾರ್ಮಿಕರ ನೋವಿಗೆ ಸ್ಪಂದಿಸಿರುವ ಶಾಸಕ ರಾಜುಗೌಡ ಅವರು ಕೇಂದ್ರ ಸರ್ಕಾರ ಹೊರ ರಾಜ್ಯದಲ್ಲಿರುವ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಅವಕಾಶ ಕಲ್ಪಿಸಿ ನಿಯಮ ಜಾರಿ ಮಾಡಿದೆ. ಆದ್ದರಿಂದ ಎಲ್ಲರನ್ನು ಕರೆ ತರುವುದಾಗಿ ತಿಳಿಸಿದ್ದಾರೆ.