ಕರ್ನಾಟಕ

karnataka

ETV Bharat / state

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಮಕ್ಕಳ ಹೆಸರಲ್ಲಿ 50 ಸಾವಿರ ರೂ ಠೇವಣಿ ಇಡುವೆ: ಸುರಪುರ ಶಾಸಕ - ಸುರಪುರದಲ್ಲಿ ಕೋವಿಡ್​ ವ್ಯಕ್ತಿ ಬಲಿ

ಕೋವಿಡ್​​ನಿಂದ ಮೃತಪಟ್ಟ ಸುರಪುರ ತಾಲೂಕು ದೇವಪುರದ ವ್ಯಕ್ತಿಯ ಮಕ್ಕಳ ಹೆಸರಿನಲ್ಲಿ ಹಣ ಠೇವಣಿ ಇಡುವುದಾಗಿ ಶಾಸಕ ರಾಜುಗೌಡ ತಿಳಿಸಿದ್ದಾರೆ.

MLA Narasimha Nayak Deposit
ಸುರಪುರ ಶಾಸಕ ರಾಜುಗೌಡ

By

Published : May 25, 2021, 7:04 AM IST

ಸುರಪುರ: ತಾಲೂಕಿನ ದೇವಪುರ ಗ್ರಾಮದ ನಿವಾಸಿ ಬಸವರಾಜ ದಾವಣಗೆರೆ ಎಂಬವರು ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಇದೀಗ ಅವರ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ತಲಾ 50 ಸಾವಿರ ರೂಪಾಯಿ ಠೇವಣಿ ಇಡುವುದಾಗಿ ಶಾಸಕ ನರಸಿಂಹ ನಾಯಕ ರಾಜುಗೌಡ ಹೇಳಿದ್ದಾರೆ.

ಮೃತ ಬಸವರಾಜ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಶಾಸಕರು, ಮೃತ ಬಸವರಾಜ ಅವರನ್ನು ಕೆಲವು ದಿನಗಳ ಹಿಂದೆಯಷ್ಟೇ ಭೇಟಿ ಮಾಡಿ ಮಾತನಾಡಿಸಿದ್ದೆ. ಅವರು ಕೋವಿಡ್ ಸೋಂಕಿಗೆ ಬಲಿಯಾಗಿರುವುದು ದು:ಖದ ಸಂಗತಿ. ಬಸವರಾಜ ಅವರಿಗೆ ಇಬ್ಬರು ಚಿಕ್ಕ ಹೆಣ್ಣು ಮಕ್ಕಳಿದ್ದಾರೆ. ಈ ಮಕ್ಕಳ ತಾಯಿಯೂ ತೀರಿಕೊಂಡಿರುವುದರಿಂದ ಈಗ ಅವರು ತೊಂದರೆಯಲ್ಲಿದ್ದಾರೆ. ಆದ್ದರಿಂದ ಆ ಮಕ್ಕಳ ಹೆಸರಿನಲ್ಲಿ ನನ್ನ ಸ್ವಂತ ಹಣದಿಂದ ತಲಾ 50 ಸಾವಿರ ರೂ. ಬ್ಯಾಂಕ್​ನಲ್ಲಿ ಠೇವಣಿ ಇರಿಸಿ ಅವರ ಭವಿಷ್ಯಕ್ಕೆ ನೆರವಾಗುತ್ತಿದ್ದೇನೆ. ಇಬ್ಬರು ಮಕ್ಕಳ ವಿದ್ಯಾಭ್ಯಾಸ ಸಹಾಯ ಮಾಡುತ್ತೇನೆ ಎಂದರು.

ಸುರಪುರ ಶಾಸಕ ರಾಜುಗೌಡ

ಇದನ್ನೂಓದಿ: ಗಡಿ ಭಾಗದ ಜನರಿಗೆ ಕೋವಿಡ್​ ಸೆಂಟರ್​ ಆರಂಭಿಸಿದ ಜೊಲ್ಲೆ ದಂಪತಿ

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ದೇವಪುರ ಗ್ರಾಮಸ್ಥರು ಇದ್ದರು.

ABOUT THE AUTHOR

...view details