ಯಾದಗಿರಿ :ಕಾಂಗ್ರೆಸ್ ಪಕ್ಷ ಈಗ ಭಾರತೀಯ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಈಗ ಅದು ಪಾಕಿಸ್ತಾನದ ರಾಷ್ಟ್ರೀಯ ಪಕ್ಷವಾಗಿದೆ ಅಂತಾ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶ ವಿರೋಧಿ ಚಟುವಟಿಕೆ ಮಾಡುವಂತಹ ಯಾವುದೇ ಸಂಘಟನೆಗಳಿದ್ರೂ ಅವುಗಳನ್ನು ನಿಷೇಧ ಮಾಡಬೇಕು. ಗುಪ್ತಚರ ಇಲಾಖೆ ಚುರುಕುಗೊಳಿಸುವ ಮೂಲಕ ಅಂತಹ ಸಂಘಟನೆಗಳ ಮೇಲೆ ತೀವ್ರ ನಿಗಾ ಇಡಬೇಕು ಅಂತಾ ತಿಳಿಸಿದ್ರು. ದೇಶ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ರಾಜಕೀಯ ನಾಯಕರ ಮೇಲೂ ನಿಗಾ ಇಡಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ದೇಶ ಬೇಕಾಗಿಲ್ಲ. ತಮ್ಮ ವೋಟ್ ಬ್ಯಾಂಕ್ಗಾಗಿ ದೇಶ ಮಾರಾಟ ಮಾಡಿದ್ರೂ ಪರವಾಗಿಲ್ಲ ಎನ್ನುವ ಧೋರಣೆ, ಸಂಸ್ಕೃತಿ ಈ ಪಕ್ಷಗಳದ್ದಾಗಿದೆ ಅಂತಾ ಯತ್ನಾಳ್ ಕಿಡಿ ಕಾರಿದ್ರು.