ಯಾದಗಿರಿ :ನಾಪತ್ತೆಯಾಗಿದ್ದ 7 ವರ್ಷದ ಬಾಲಕನೊಬ್ಬ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಕೋಟಗೇರಾ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಕಾಣೆಯಾಗಿದ್ದ ಬಾಲಕ. ಆಟವಾಡಲು ಹೋಗಿ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ಮಧ್ಯಾಹ್ನದಿಂದ ಬಾಲಕ ಕಾಣೆಯಾಗಿದ್ದನೆಂದು ತಿಳಿದು ಬಂದಿದೆ.
ಕಾಣೆಯಾಗಿದ್ದ ಏಳು ವರ್ಷದ ಬಾಲಕ ಇಂದು ಶವವಾಗಿ ಪತ್ತೆ - ಏಳು ವರ್ಷದ ಬಾಲಕ ಇಂದು ಶವವಾಗಿ ಪತ್ತೆ
ಸದ್ಯ ಸ್ಥಳೀಯರ ಸಹಾಯದಿಂದ ಪೊಲೀಸರು ಬಾಲಕನ ಶವವನ್ನು ಹೊರ ತೆಗೆದಿದ್ದಾರೆ. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
![ಕಾಣೆಯಾಗಿದ್ದ ಏಳು ವರ್ಷದ ಬಾಲಕ ಇಂದು ಶವವಾಗಿ ಪತ್ತೆ missing-boy-found-dead-in-well-at-kotagera](https://etvbharatimages.akamaized.net/etvbharat/prod-images/768-512-13430639-thumbnail-3x2-kdkdd.jpg)
ಬಾಲಕನ ಶವ ಪತ್ತೆ
ಸದ್ಯ ಸ್ಥಳೀಯರ ಸಹಾಯದಿಂದ ಪೊಲೀಸರು ಬಾಲಕನ ಶವವನ್ನು ಹೊರ ತೆಗೆದಿದ್ದಾರೆ. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.