ಕರ್ನಾಟಕ

karnataka

ETV Bharat / state

ಸರ್ಕಾರಿ ವೈದ್ಯನಿಂದ ದುರ್ವರ್ತನೆ ಆರೋಪ: ಸಿಬ್ಬಂದಿ ಪ್ರತಿಭಟನೆ - ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾಕ್ಟರ್ ಎಂಎಂ ರಾಹಿಲ್

ಮಹಿಳೆಯರಿಗೆ ನೀಡಬೇಕಾದ ಸ್ಯಾನಿಟರಿ ಪ್ಯಾಡ್ ಸೇರಿದಂತೆ ವಿವಿಧ ವಸ್ತುಗಳು ಕೊಳೆಯುತ್ತಿವೆ. ಇದ್ಯಾವುದರ ಬಗ್ಗೆಯೂ ಗಮನ ಹರಿಸದ ವೈದ್ಯ ಡಾ. ಎಂ.ಎಂ.ರಾಹಿಲ್, ಸಿಬ್ಬಂದಿ ವಿರುದ್ಧ ಸದಾ ಕಾಲ ದುರ್ವರ್ತನೆ ತರುವುದಲ್ಲದೆ ಅವಾಚ್ಯ ಪದಗಳಿಂದ ನಿಂದಿಸುತ್ತಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಇದರಿಂದ ಬೇಸತ್ತ ಮಹಿಳಾ ಸಿಬ್ಬಂದಿಯೊಬ್ಬರು ಕಣ್ಣೀರು ಹಾಕಿದ್ದಾರೆ.

government-doctor-in-surapura-news
ಪೇಠ ಅಮಾಪೂರ ಸರ್ಕಾರಿ ವೈದ್ಯನ ದುರ್ವರ್ತನೆ

By

Published : Feb 2, 2021, 9:38 PM IST

ಸುರಪುರ:ತಾಲೂಕಿನ ಪೇಠ ಅಮಾಪೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಎಂ.ಎಂ.ರಾಹಿಲ್ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ.

ಪೇಠ ಅಮಾಪೂರ ಸರ್ಕಾರಿ ವೈದ್ಯನ ವಿರುದ್ಧ ಪ್ರತಿಭಟನೆ

ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: ಸರ್ಕಾರಕ್ಕೆ ತನಿಖಾ ವರದಿ ಕೇಳಿದ ಹೈಕೋರ್ಟ್

ಆಸ್ಪತ್ರೆ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರುತ್ತಿರುವುದಲ್ಲದೆ ಮಹಿಳಾ ಸಿಬ್ಬಂದಿ ಜೊತೆ ಕೂಡ ಅವಾಚ್ಯವಾಗಿ ಮಾತನಾಡುವುದರ ವಿರುದ್ಧ ಆಸ್ಪತ್ರೆಯ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಇವರ ವಿರುದ್ಧ ಘೋಷಣೆಗಳನ್ನು ಕೂಗಿ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಿಬ್ಬಂದಿ, ವೈದ್ಯರ ವಿರುದ್ಧ ಆರೋಪಿಸಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ. ಅಲ್ಲದೆ ಕಳೆದ ಒಂದು ವರ್ಷದಿಂದಲೂ ಕೂಡ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಬಂದರು ಭಾಗಿಯಾಗುವುದಿಲ್ಲ. ಸರ್ಕಾರದಿಂದ ರೋಗಿಗಳಿಗೆ ಕೊಡುವ ಔಷಧಿಗಳನ್ನು ಸರಿಯಾಗಿ ವಿತರಿಸದೆ ಔಷಧಿ ಕೋಣೆಗಳಲ್ಲಿ ಹಾಳಾಗುತ್ತವೆ.

ಮಹಿಳೆಯರಿಗೆ ನೀಡಬೇಕಾದ ಸ್ಯಾನಿಟರಿ ಪ್ಯಾಡ್ ಸೇರಿದಂತೆ ವಿವಿಧ ವಸ್ತುಗಳು ಕೊಳೆಯುತ್ತಿವೆ. ಇದ್ಯಾವುದರ ಬಗ್ಗೆಯೂ ಗಮನ ಹರಿಸದ ವೈದ್ಯ ಡಾ. ಎಂ.ಎಂ.ರಾಹಿಲ್, ಸಿಬ್ಬಂದಿ ವಿರುದ್ಧ ಸದಾ ಕಾಲ ದುರ್ವರ್ತನೆ ತರುವುದಲ್ಲದೆ ಅವಾಚ್ಯ ಪದಗಳಿಂದ ನಿಂದಿಸುತ್ತಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಇದರಿಂದ ಬೇಸತ್ತ ಮಹಿಳಾ ಸಿಬ್ಬಂದಿಯೊಬ್ಬರು ಕಣ್ಣೀರು ಹಾಕಿದ್ದಾರೆ.

ಸಾರ್ವಜನಿಕರೊಂದಿಗೂ ಕೂಡ ಇವರ ವರ್ತನೆ ಸರಿಯಾಗಿಲ್ಲವಂತೆ. ಕಳೆದ ಕೆಲ ದಿನಗಳ ಹಿಂದೆ ಪೇಠ ಅಮ್ಮಾಪುರ ಗ್ರಾಮದ ವ್ಯಕ್ತಿಯೊಬ್ಬರೊಂದಿಗೆ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಇವರ ದುರ್ವರ್ತನೆ ಕುರಿತು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಆಸ್ಪತ್ರೆ ಸಿಬ್ಬಂದಿ ಮನವಿ ಸಲ್ಲಿಸಿದ್ದು, ತಾಲೂಕು ಆರೋಗ್ಯ ಅಧಿಕಾರಿ ಡಾ. ಆರ್.ವಿ.ನಾಯಕ್ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ದುರ್ವರ್ತನೆ ತೋರುವ ವೈದ್ಯಾಧಿಕಾರಿ ರಾಹಿಲ್ ವಿರುದ್ಧ ಹಿಂದೆ ಮೂಲ ನಿವಾಸಿ ಅಂಬೇಡ್ಕರ್ ಸೇನೆ ಪ್ರತಿಭಟನೆ ನಡೆಸಿ ಕ್ರಮಕ್ಕಾಗಿ ಮನವಿ ಸಲ್ಲಿಸಿತ್ತು. ಈಗ ಎಲ್ಲೆಡೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ.

ABOUT THE AUTHOR

...view details