ಯಾದಗಿರಿ:ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯವಸತಿ ಶಾಲೆಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವ್ಯವಸ್ಥೆ ಕಂಡ ಸಚಿವರು ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು.
ರಾತ್ರಿ ಸುಮಾರು 8 ಗಂಟೆಗೆವಸತಿ ಶಾಲೆಗೆಸಚಿವರು ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆಯ ದುಸ್ಥಿತಿ, ಸ್ವಚ್ಚತೆ ಕಂಡು ಸಿಡಿಮಿಡಿಗೊಂಡರು.ವಸತಿ ನಿಯಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ತಕ್ಷಣವೇ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಜೊತೆಗೆ ರಾತ್ರಿ ವಸತಿ ಶಾಲೆಯಲ್ಲೇ ಸಚಿವರು ವಾಸ್ತವ್ಯ ಹೂಡಿದರು.