ಕರ್ನಾಟಕ

karnataka

ETV Bharat / state

ನಾನ್ಯಾರು ಅಂತಾ ಗೊತ್ತಿಲ್ವೇನ್ರಿ... ಜೆಸ್ಕಾಂ ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಪ್ರಭು ಚವ್ಹಾಣ - ಜಿಲ್ಲಾ ಉಸ್ತುವಾರಿ ಸಚಿವ

ಯಾದಗಿರಿ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಇಂದು ನಗರದಲ್ಲಿರುವ ಜೆಸ್ಕಾಂ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದರು. ಜೆಸ್ಕಾಂ ಎಇ ಛೇಂಬರ್ ಪ್ರವೇಶಿಸಿದ ಸಚಿವರು ನಾನ್ಯಾರು ಅಂತಾ ಗೊತ್ತಾ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಸಚಿವರ ಪ್ರಶ್ನೆಗೆ ತಬ್ಬಿಬ್ಬಾದ ಜೆಸ್ಕಾಂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

Minister Prabhu Chauhan

By

Published : Oct 5, 2019, 1:44 PM IST

Updated : Oct 5, 2019, 6:09 PM IST

ಯಾದಗಿರಿ:ನಗರದಲ್ಲಿರುವ ಜೆಸ್ಕಾಂ ಕಚೇರಿಗೆ ಧಿಡೀರ್​ ಭೇಟಿ ನೀಡಿದ ಸಚಿವರನ್ನೆ ಗುರುತಿಸದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ತರಾಟೆಗೆ ತೆಗೆದುಕೊಂಡ ಘಟನೆ ಯಾದಗಿರಿ ಜೆಸ್ಕಾಂ ಕಚೇರಿಯಲ್ಲಿ ನಡೆದಿದೆ.

ಜೆಸ್ಕಾಂ ಕಚೇರಿಗೆ ಧಿಡೀರ್​ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ

ಇಂದು ಯಾದಗಿರಿ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಜೆಸ್ಕಾಂ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದರು. ಜೆಸ್ಕಾಂ ಎಇ ಛೇಂಬರ್ ಪ್ರವೇಶಿಸಿದ ಸಚಿವರು ನಾನ್ಯಾರು ಅಂತಾ ಗೊತ್ತಾ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಸಚಿವರ ಪ್ರಶ್ನೆಗೆ ತಬ್ಬಿಬ್ಬಾದ ಜೆಸ್ಕಾಂ ಅಧಿಕಾರಿಗಳು ಗೊತ್ತಿಲ್ಲವೆಂದು ಹೇಳಿದರು.

ಇದನ್ನೂ ಓದಿ...ಸರ್ಕಾರಿ ಆಸ್ಪತ್ರೆಗೆ ಸಚಿವರ ದಿಢೀರ್​ ಭೇಟಿ: ಚವ್ಹಾಣ್​ರನ್ನೇ ಗುರುತು ಹಿಡಿಯದ ಸಿಬ್ಬಂದಿ!

ಅಧಿಕಾರಿಗಳ ಮಾತಿನಿಂದ ಗರಂ ಆದ ಸಚಿವ ಪ್ರಭು ಚವ್ಹಾಣ, ನಾನ್ಯಾರು ಅಂತಾ ಇಡಿ ಕರ್ನಾಟಕಕ್ಕೆ ಗೊತ್ತು ನಿಮಗೆ ಗೊತ್ತಿಲ್ವಾ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಹಾಜರಾತಿ ಪುಸ್ತಕ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಪಡೆದರು.

Last Updated : Oct 5, 2019, 6:09 PM IST

ABOUT THE AUTHOR

...view details