ಕರ್ನಾಟಕ

karnataka

ETV Bharat / state

ಸಿಲಿಂಡರ್ ಸ್ಪೋಟ : ಮೃತರ ಸಂಖ್ಯೆ 5ಕ್ಕೆ ಏರಿಕೆ.. ಕುಟುಂಬಸ್ಥರ ಮನೆಗೆ ಸಚಿವ ಪ್ರಭು ಚೌಹಾಣ್ ಭೇಟಿ, ಸಾಂತ್ವನ - ಸಿಲಿಂಡರ್​ ಸ್ಪೋಟದಿಂದ ಮೃತಪಟ್ಟವರ ಮನೆಗೆ ಪ್ರಭು ಚವ್ಹಾಣ್​ ಭೇಟಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು. ಅಲ್ಲದೇ, ಇನ್ಸೂರೆನ್ಸ್ ಸೇರಿದಂತೆ ಇತರ ಸೌಲಭ್ಯಗಳು ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಸಂಭವಿಸಿದ ಸಿಲಿಂಡರ್ ಸ್ಪೋಟ ದುರ್ಘಟನೆ ಬಗ್ಗೆ ತನಿಖೆ ಚುರುಕುಗೊಳಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಅವರಿಗೆ ಸೂಚಿಸಿದ್ದೇನೆ. ತನಿಖಾ ವರದಿ ನೋಡಿ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು..

minister-prabhu-chauhan-meets-dead-family-members-in-yadagiri
ಮೃತ ಕುಟುಂಬಸ್ಥರ ಮನೆಗೆ ಸಚಿವ ಪ್ರಭು ಚವ್ಹಾಣ್ ಭೇಟಿ, ಸಾಂತ್ವನ

By

Published : Feb 28, 2022, 5:15 PM IST

Updated : Feb 28, 2022, 5:25 PM IST

ಯಾದಗಿರಿ :ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಫೆ. 25ರ ಶುಕ್ರವಾರದಂದು ಸಂಭವಿಸಿದ ಸಿಲಿಂಡರ್ ಸ್ಪೋಟದಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿತ್ತು. ಈ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ 4 ಕುಟುಂಬಗಳ ಸಂಬಂಧಿಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಸೋಮವಾರ ಭೇಟಿ ನೀಡಿ, ಸಾಂತ್ವನ ಹೇಳಿದರು. ಪ್ರತಿ ಕುಟುಂಬಕ್ಕೆ ಚಲಾ 25 ಸಾವಿರ ರೂ. ವೈಯಕ್ತಿಕ ನೆರವು ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಮೃತ ಕುಟುಂಬಸ್ಥರ ಮನೆಗೆ ಸಚಿವ ಪ್ರಭು ಚೌಹಾಣ್ ಭೇಟಿ, ಸಾಂತ್ವನ..

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದುರ್ಘಟನೆಯಲ್ಲಿ ಮೃತಪಟ್ಟ ಆಧ್ಯ (3), ಮಹಾಂತೇಶ (18 ತಿಂಗಳ ಮಗು), ನಿಂಗಮ್ಮ ಹೇರುಂಡಿ (85) ಹಾಗೂ ಗಂಗಮ್ಮ ಬಂಟನೂರು (50) ಎಂಬುವರ ಕುಟುಂಬಗಳಿಗೆ ಭೇಟಿ ನೀಡಿದರು. ತಮ್ಮ ವೈಯಕ್ತಿಕ ನೆರವಿನ ಜೊತೆಗೆ ಬರುವ ಬಜೆಟ್‌ ಅಧಿವೇಶನದಲ್ಲಿ ಚರ್ಚಿಸಿ, ಸರ್ಕಾರದಿಂದಲೂ ಎಲ್ಲಾ ರೀತಿಯ ಪರಿಹಾರ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು. ಅಲ್ಲದೇ, ಇನ್ಸೂರೆನ್ಸ್ ಸೇರಿದಂತೆ ಇತರ ಸೌಲಭ್ಯಗಳು ಕೊಡಿಸುವ ವ್ಯವಸ್ಥೆ ಮಾಡಲಾಗುವುದು.

ಸಂಭವಿಸಿದ ಸಿಲಿಂಡರ್ ಸ್ಪೋಟ ದುರ್ಘಟನೆ ಬಗ್ಗೆ ತನಿಖೆ ಚುರುಕುಗೊಳಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಅವರಿಗೆ ಸೂಚಿಸಿದ್ದೇನೆ. ತನಿಖಾ ವರದಿ ನೋಡಿ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡ ಆರು ವರ್ಷದ ಬಾಲಕಿಯೊಬ್ಬಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾಳೆ. ಈಗ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ. ಗಾಯಗೊಂಡ 24 ಜನರ ಪೈಕಿ ಕೆಲವರ ಸ್ಥಿತಿ ಇನ್ನು ಗಂಭೀರವಾಗಿದೆ ಎನ್ನಲಾಗುತ್ತಿದೆ. ಗ್ರಾಮದ ಶ್ವೇತಾ ಶಂಕರ ಮಲಗೊಂಡ (6) ಎನ್ನುವ ಬಾಲಕಿ ಮೃತಪಟ್ಟಿದ್ದಾಳೆ.

ಈ ಸಂದರ್ಭದಲ್ಲಿ ಸಂಸದ ರಾಜ ಅಮರೇಶ್ವರ ನಾಯಕ್, ಯಾದಗಿರಿ ಮತ ಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ್, ಜಿಲ್ಲಾಧಿಕಾರಿ ಡಾ. ಆರ್. ರಾಗಪ್ರಿಯಾ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣ ಭೂಪಾಲರೆಡ್ಡಿ, ಚಂದ್ರಶೇಖರ್ ಮಾಗನೂರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೇವರಾಜ್ ನಾಯಕ್, ಡಾ. ಚಂದ್ರಶೇಖರ್ ಸುಬೇದಾರ್, ಗ್ರಾಮದ ಮುಖಂಡರಾದ ದೊಡ್ಡಪ್ಪ ದೇಸಾಯಿ, ಷಣ್ಮುಖಪ್ಪ ಕಕ್ಕೇರಿ ಸೇರಿದಂತೆ ಅನೇಕರು ಇದ್ದರು.

ಓದಿ:ಉಪಕುಲಪತಿಗಳ ಕಾನೂನು ಬಾಹಿರ ನಿರ್ಧಾರಗಳನ್ನು ರದ್ದು ಮಾಡಿ ಕ್ರಮ ಕೈಗೊಳ್ಳಿ : ಬೆಂ. ವಿವಿ ಸಿಂಡಿಕೇಟ್ ಸದಸ್ಯರ ಆಗ್ರಹ

Last Updated : Feb 28, 2022, 5:25 PM IST

ABOUT THE AUTHOR

...view details