ಯಾದಗಿರಿ: ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಇದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಯಾದಗಿರಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ .ಈಶ್ವರಪ್ಪ ಅವರು ಪ್ರತ್ಯುತ್ತರ ನೀಡಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯತೀಂದ್ರ ಸೂಪರ್ ಸಿಎಂ ಆಗಿದ್ರು: ಈಶ್ವರಪ್ಪ ವ್ಯಂಗ್ಯ - ಸಚಿವ ಕೆ.ಎಸ್ .ಈಶ್ವರಪ್ಪ ವಾಗ್ದಾಳಿ
ನಮ್ಮ ಪಕ್ಷ ಗಟ್ಟಿ ಆಗಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಯ 25 ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ಗೆ ಒಂದು ಸ್ಥಾನ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಟೀಕೆ ಮಾಡಬೇಕು ಎನ್ನುವ ಕಾರಣಕ್ಕೆ ಬಿಜೆಪಿ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್. ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅವರ ಮಗ ಯತೀದ್ರ ಕೂಡ ಸೂಪರ್ ಸಿಎಂ ಆಗಿದ್ದರು. ಅದನ್ನು ಮರೆತು ಅವರು ಈಗ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಟೀಕೆ ಮಾಡುವ ಮೊದಲು ತಮ್ಮ ಬೆನ್ನು ತಿರುಗಿ ನೋಡಿಕೊಳ್ಳಬೇಕು. ನಮ್ಮ ಪಕ್ಷ ಗಟ್ಟಿ ಆಗಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಯ 25 ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ಗೆ ಒಂದು ಸ್ಥಾನ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಟೀಕೆ ಮಾಡಬೇಕು ಎನ್ನುವ ಕಾರಣಕ್ಕೆ ಬಿಜೆಪಿ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಉಮೇಶ್ ಕತ್ತಿ ಮನೆಯಲ್ಲಿ ಬಿಜೆಪಿ ಶಾಸಕರು ನಡೆಸಿದ ಸಭೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಬಿಜೆಪಿ ಶಾಸಕರನ್ನು ಉಮೇಶ್ ಕತ್ತಿ ಅವರು ಊಟಕ್ಕೆ ಕರೆದಿದ್ದರು. ಹಾಗೆಯೇ ನೀವು ನನಗೆ ಕಾಫಿ ಕುಡಿಯುದಕ್ಕೆ ಕರೆದರೆ ನಾನು ಬಂದರೆ ನೀವು ಬಿಜೆಪಿಗೆ ಸೇರಿದಂತೆ ಆಗುತ್ತಾ ಎಂದು ಪ್ರಶ್ನಾರ್ಥಕವಾಗಿ ವ್ಯಾಖ್ಯಾನಿಸಿದರು.