ಕರ್ನಾಟಕ

karnataka

ETV Bharat / state

ಕ್ವಾರಂಟೈನ್​ ಕೇಂದ್ರದಲ್ಲಿಲ್ಲ ಕನಿಷ್ಠ ಮೂಲ ಸೌಕರ್ಯ: ವಿಡಿಯೋ ಹರಿಬಿಟ್ಟ ವಲಸೆ ಕಾರ್ಮಿಕರು

ಸಂಕಷ್ಟಕ್ಕೆ ಸಿಲುಕಿರುವ ಕ್ವಾರಂಟೈನ್​​ ಕೇಂದ್ರದ ಕಾರ್ಮಿಕರು ವಿಡಿಯೋ ಮಾಡಿ, ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ ತಮಗಾಗುತ್ತಿರುವ ಸಮಸ್ಯೆಗಳನ್ನು ಸಂಸದ ಉಮೇಶ್ ಜಾಧವ್ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.

Minimum infrastructure is not available in quarantine center at yadgir
ಕ್ವಾರೆಂಟೈನ್ ಕೇಂದ್ರ

By

Published : May 26, 2020, 12:16 PM IST

Updated : May 26, 2020, 2:53 PM IST

ಯಾದಗಿರಿ:ಲಾಕ್​ಡೌನ್​​ ಸಡಲಿಕೆ ನಂತರ ಮಹಾರಾಷ್ಟ್ರದಿಂದ ಆಗಮಿಸಿದ ವಲಸೆ ಕಾರ್ಮಿಕರನ್ನ ಜಿಲ್ಲೆಯ ವಿವಿಧ ವಸತಿ ನಿಲಯ, ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಜಿಲ್ಲಾಡಳಿತ ಕ್ವಾರೆಂಟೈನ್​​ ಮಾಡಿದೆ. ಆದರೆ ಕ್ವಾರಂಟೈನ್​​ ಕೇಂದ್ರಗಳಲ್ಲಿ ವಾಸವಿರುವ ಕಾರ್ಮಿಕರಿಗೆ ಮಾತ್ರ ಕನಿಷ್ಠ ಮೂಲ ಸೌಕರ್ಯಗಳು ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಕ್ವಾರೆಂಟೈನ್ ಕೇಂದ್ರದಲ್ಲಿರುವರಿಗಿಲ್ಲ ಕನಿಷ್ಠ ಮೂಲಸೌಕರ್ಯ ಆರೋಪ

ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಕ್ವಾರಂಟೈನ್ ಕೇಂದ್ರದ ಕಾರ್ಮಿಕರು ಮೊಬೈಲ್ ವಿಡಿಯೋ ಮಾಡಿ, ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ ತಮಗಾಗುತ್ತಿರುವ ಸಮಸ್ಯೆಗಳನ್ನು ಸಂಸದ ಉಮೇಶ್ ಜಾಧವ್ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.

ಇಷ್ಟೇ ಅಲ್ಲದೇ ಇಲ್ಲಿರುವ ಕಾರ್ಮಿಕರಿಗೆ ಜಿಲ್ಲಾಡಳಿತ ಸರಿಯಾಗಿ ಊಟ, ಕುಡಿಯಲು ನೀರು ನೀಡುತ್ತಿಲ್ಲ ಎಂದು ಕ್ವಾರೆಂಟೈನ್​​ನಲ್ಲಿದ್ದವರು ಆರೋಪಿಸಿದ್ದಾರೆ. ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಿ ಇಲ್ಲವಾದಲ್ಲಿ ನಮ್ಮನ್ನ ಬಿಟ್ಟು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : May 26, 2020, 2:53 PM IST

ABOUT THE AUTHOR

...view details