ಕರ್ನಾಟಕ

karnataka

ETV Bharat / state

ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದ ಅವ್ಯವಸ್ಥೆ.. ಅನ್‌ಫಿಟ್ ವಾರ್ಡನ್‌ ವಿರುದ್ಧ ಕಿಡಿ.. - undefined

ಯಾದಗಿರಿ ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯವು ಅವ್ಯವಸ್ಥೆಯಿಂದ ಕೂಡಿದೆ ಎಂದು ರಾಜ್ಯ ಆಹಾರ ಆಯೋಗ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.

ಅವ್ಯವಸ್ಥೆಯಿಂದ ಕೂಡಿದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ: ಪತ್ರಿಕಾಗೋಷ್ಠಿಯಲ್ಲಿ ಸದಸ್ಯರ ಆಕ್ರೋಶ

By

Published : Jul 21, 2019, 12:29 PM IST

ಯಾದಗಿರಿ:ಜಿಲ್ಲೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯವು ಅವ್ಯವಸ್ಥೆಯಿಂದ ಕೂಡಿದೆ ಎಂದು ರಾಜ್ಯ ಆಹಾರ ಆಯೋಗದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ರಾಮಸಮುದ್ರ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯವು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಆಯೋಗದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಅವ್ಯವಸ್ಥೆಯಿಂದ ಕೂಡಿದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ..

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಸದಸ್ಯರುಗಳು, ರಾಣಿ ಚೆನ್ನಮ್ಮ ವಸತಿ ನಿಲಯದ ವಾರ್ಡನ್ ಅನ್​ಫಿಟ್ ಆಗಿದ್ದಾರೆ. ಅವರು ವಾರ್ಡನ್ ಆಗುವುದಕ್ಕೆ ಯೋಗ್ಯರಲ್ಲ. ವಸತಿ ನಿಲಯದ ಕಾರ್ಯವನ್ನು ಸರಿಯಾಗಿ ಕಾರ್ಯನಿರ್ವಹಿಸದೆ ಕಾಲ ಹರಣ ಮಾಡಿದ್ದಾರೆ ಎಂದು ಸಿಡಿಮಿಡಿಗೊಂಡರು.

ವಸತಿ ನಿಲಯದ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ದಾಖಲಾತಿ ಕೇಳಿದ್ರೆ ನೀರಲ್ಲಿ ನೆನೆದಿವೆ ಎಂದು ಕುಂಟು ನೇಪ ಹೇಳಿದ್ದಾರೆ. ಇನ್ನೊಂದು ಬಾರಿ ಕೇಳಿದ್ರೆ, ಪ್ರಿನಿಪಾಲ್ ಹತ್ತಿರ ಕೀ ಇದೆ ಎಂದು ಹೇಳುತ್ತಾರೆ. ಇವರು ವಾರ್ಡನ್ ಆಗುವುದಕ್ಕೆ ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅಂಗನಾವಾಡಿ ಕೇಂದ್ರಗಳ ಕಾರ್ಯಕರ್ತರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಅಲ್ಲಿರುವ ಸ್ವಚ್ಛತೆ ಹಾಗೂ ಅಡುಗೆ ವ್ಯವಸ್ಥೆ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು. ಹಾಗೆಯೇ ಜಿಲ್ಲಾ ಕೇಂದ್ರದಲ್ಲಿರುವ ನ್ಯಾಯ ಬೆಲೆ ಅಂಗಡಿಗಳು ಮಹಾ ಭ್ರಷ್ಟಾಚಾರವನ್ನು ಎಸಗುತ್ತಿವೆ. ಸಾರ್ವಜನಿಕರಿಗೆ ಕಡಿಮೆ ಪ್ರಮಾಣದಲ್ಲಿ ದವಸ ಧಾನ್ಯಗಳನ್ನು ನೀಡುತ್ತಿದ್ದಾರೆ. ದವಸ ಧಾನ್ಯಗಳ ದರದ ಪಟ್ಟಿಯ ಬೋರ್ಡ್‌ಗಳನ್ನ ಹಾಕದೆ ಸಾರ್ವಜನಿಕರಿಗೆ ಮೋಸ ಮಾಡ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details