ಗುರುಮಿಠಕಲ್(ಯಾದಗಿರಿ) :ಗುರುಮಠಕಲ್ ತಾಲೂಕಿನ ಮೀನಾಸಪುರ ಗ್ರಾಮದಲ್ಲಿ ದಲಿತರು ಮೃತಪಟ್ಟರೆ ಅಂತ್ಯಕ್ರಿಯೆ ಮಾಡಲು ಯೋಚಿಸುವ ಪರಿಸ್ಥಿತಿ ಇದೆ. ಯಾಕೆಂದರೆ, ರುದ್ರಭೂಮಿ ಹಾಗೂ ಗ್ರಾಮದ ಮಧ್ಯೆ ದೊಡ್ಡ ಹಳ್ಳವಿದೆ. ಯಾರಾದ್ರೂ ಸತ್ತರೇ ಹಳ್ಳದಾಟಿ ಸ್ಮಶಾನಕ್ಕೆ ಶವ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಬೇಕು.
ಮಳೆಗಾಲದಲ್ಲಂತೂ ಇವರ ಸ್ಥಿತಿ ಅಯೋಮಯ. ಸದ್ಯ ಮೀನಾಸಪುರ ಗ್ರಾಮದ ಕೆರೆ ಭರ್ತಿಯಾಗಿದೆ. ಹಳ್ಳವು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಮೀನಾಸಪುರದ ಗ್ರಾಮಸ್ಥರು ಮೃತದೇಹವನ್ನು ಹೀಗೆ ಹರಿಯುತ್ತಿರುವ ಹಳ್ಳದ ಮಧ್ಯೆ ಹೊತ್ತೊಯ್ಯುವ ದೃಶ್ಯ ನೋಡಿದ್ರೆ ಎಂಥವರ ಮನಸ್ಸೂ ಒಮ್ಮೆ ಕಲಕದೇ ಇರಲ್ಲ. ಜೀವವಿಲ್ಲದ ದೇಹದ ಅಂತ್ಯಕ್ರಿಯೆಗೆ ಜೀವದ ಹಂಗು ತೊರೆದು ಹೋಗುವ ಸ್ಥಿತಿ ಇದೆ.