ಸುರಪುರ: ದುಂದುವೆಚ್ಚ ಮಾಡಿ ಜನ್ಮದಿನ ಆಚರಿಸಿಕೊಳ್ಳುವವರ ಮಧ್ಯೆ ಇಲ್ಲೊಬ್ಬರು ರೈತರಿಗೆ ಸಸಿ ಮತ್ತು ಮಾಸ್ಕ್ ವಿತರಿಸಿ ವಿಶಿಷ್ಟವಾಗಿ ಜನ್ಮದಿನ ಆಚರಿಸಿಕೊಂಡ ಘಟನೆ ಸುರಪುರದಲ್ಲಿ ನಡೆದಿದೆ.
ಸಸಿ, ಮಾಸ್ಕ್ ಹಂಚಿ ಪರಿಸರ ದಿನ, ಜನ್ಮದಿನದ ಅರ್ಥಪೂರ್ಣ ಆಚರಣೆ - Organization of the struggle for the exploited
ಪರಿಸರ ದಿನವಾದ ಈ ಶುಭದಿದಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಧ್ಯಕ್ಷ ವೆಂಕೋಬ ದೊರೆ ರೈತರಿಗೆ ಸಸಿ ಮತ್ತು ಮಾಸ್ಕ್ ವಿತರಿಸಿ ವಿಶಿಷ್ಟವಾಗಿ ಜನ್ಮದಿನ ಆಚರಿಸಿಕೊಂಡರು.
ಸಸಿ, ಮಾಸ್ಕ್ ಹಂಚಿ ಪರಿಸರ ದಿನ, ಜನ್ಮದಿನದ ಅರ್ಥಪೂರ್ಣ ಆಚರಣೆ
ಶೋಷಿತರ ಪರ ಹೋರಾಟ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಪರಿಸರ ದಿನವಾದ ಈ ಶುಭದಿದಂದು ತಮ್ಮ ಜನ್ಮದಿನವನ್ನ ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ನೂರಾರು ರೈತರಿಗೆ ಸಸಿಗಳನ್ನು ಹಾಗೂ ಕೊರೊನಾದಿಂದ ಸುರಕ್ಷಿತವಾಗಿರಲು ಮಾಸ್ಕ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಮೌಲಾಸಾಬ್, ಉಪ ಅರಣ್ಯ ಅಧಿಕಾರಿ ಶರಣಪ್ಪ ಕುಂಬಾರ್, ಪಿಎಸ್ಐ ಚೇತನ್ ಬಿದರಿ, ರಾಹುಲ್ ಹುಲಿಮನಿ, ಮನೋಹರ್ ರಾಥೋಡ್, ಪರಮೇಶ್ ನಾಯಕ್ ಉಸ್ತಾದ್, ವಜಾಹತ್ ಹುಸೇನ್ ಭಾಗವಹಿಸಿದ್ದರು.