ಯಾದಗಿರಿ : ಮಂಗಳಮುಖಿ ಮೇಲೆ ಕೆಲ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವಂತಹ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸತ್ತಳೆಂದು ಬಿಟ್ಟು ಹೋದ ಮಂಗಳಮುಖಿ ಬದುಕಿ ಬಂದಾಗ.. ಆಗಿದ್ದೇನು? - ಸುರಪುರ ಮಂಗಳಮುಖಿ ಹಲ್ಲೆ ಸುದ್ದಿ
ಕಡಬಗೇರಾ ಗ್ರಾಮದ ನೀವಾಸಿ ಸಲೀಮಾ ಎಂಬುವಳೆ ಹಲ್ಲೆಗೊಳಗಾದ ಮಂಗಳಮುಖಿ. ಸಲೀಮಾಳನ್ನು ಕೊಲೆ ಮಾಡಲು ಯತ್ನಿಸಿದ್ದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆಗ ಸಲೀಮಾ ಮರಣ ಹೊಂದಿದ್ದಾಳೆ ಎಂದು ತಿಳಿದು ಸ್ಥಳದಲ್ಲೇ ಬಿಟ್ಟು ಹೋಗಿದ್ದರು.
ಜಿಲ್ಲೆಯ ಸುರಪುರ ತಾಲೂಕಿನ ಹೆಗ್ಗಣ್ಣದೊಡ್ಡಿ ಗ್ರಾಮದ ಹೊರ ಭಾಗದಲ್ಲಿ ಅಕ್ಟೋಬರ್ 17ರಂದು ಘಟನೆ ನಡೆದಿದ್ದು, ಕಡಬಗೇರಾ ಗ್ರಾಮದ ನೀವಾಸಿ ಸಲೀಮಾ ಎಂಬುವಳೆ ಹಲ್ಲೆಗೊಳಗಾದ ಮಂಗಳಮುಖಿ. ಸಲೀಮಾಳನ್ನು ಕೊಲೆ ಮಾಡಲು ಯತ್ನಿಸಿದ್ದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆಗ ಸಲೀಮಾ ಮರಣಹೊಂದಿದ್ದಾಳೆ ಎಂದು ತಿಳಿದು ಸ್ಥಳದಲ್ಲೇ ಬಿಟ್ಟು ಹೋಗಿದ್ದರು.
ಸ್ಥಳೀಯರ ಸಹಾಯದಿಂದ ಮಂಗಳಮುಖಿ ಸಲೀಮಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಸಲೀಮಾ ಕೈ ಕಾಲು ಮುರಿದಿದ್ದು, ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದು ಹಲ್ಲೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.