ಕರ್ನಾಟಕ

karnataka

ETV Bharat / state

ಸುರಪುರದ ಜಾಲಿಬೆಂಚಿ ಗ್ರಾಮದಲ್ಲಿ ನಾಗರ ಪಂಚಮಿ ಅಂಗವಾಗಿ ಸಾಹಸಮಯ ಪಂದ್ಯ ಕಟ್ಟಿ ಗೆದ್ದ ಭೂಪ - Surapura news

ನಾಗರ ಪಂಚಮಿ ಅಂಗವಾಗಿ ವಿಧದ ಪಂದ್ಯ ಆಡುವುದು ಸಂಪ್ರದಾಯವಾದರೂ ಒಂದು ಕೈಯಿಂದ ಭುಜದ ಮೇಲೆ ತುಂಬಿದ ಕೊಡ ಹಿಡಿದು, ಮತ್ತೊಂದು ಕೈಯಿಂದ ಬಂಡಿ ಗಾಲಿ ಉರುಳಿಸುತ್ತ ಎರಡು ಕಿಲೋ ಮೀಟರ್ ಎಲ್ಲೂ ನಿಲ್ಲದೆ ನಡೆಯುವುದು ನಿಜಕ್ಕೂ ಸಾಹಸಮಯವಾಗಿದೆ.

Surapura
ಸುರಪುರದ ಜಾಲಿಬೆಂಚಿ ಗ್ರಾಮದಲ್ಲಿ ನಾಗರ ಪಂಚಮಿ ಅಂಗವಾಗಿ ಸಾಹಸಮಯ ಪಂದ್ಯಕಟ್ಟಿ ಗೆದ್ದ ಭೂಪ

By

Published : Jul 25, 2020, 4:58 PM IST

ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಸಾಹಸಮಯ ಪಂದ್ಯ ಕಟ್ಟಿ ಸಾಹಸ ಮೆರೆಯಲಾಗಿದೆ.

ಸುರಪುರದ ಜಾಲಿಬೆಂಚಿ ಗ್ರಾಮದಲ್ಲಿ ನಾಗರ ಪಂಚಮಿ ಅಂಗವಾಗಿ ಸಾಹಸಮಯ ಪಂದ್ಯ ಕಟ್ಟಿ ಗೆದ್ದ ಭೂಪ

ಜಾಲಿಬೆಂಚಿ ಗ್ರಾಮದ ರಾಜಮಹ್ಮದ್ ಚೆನ್ನೂರ ಎಂಬ ಯುವಕ ಪಂದ್ಯ ಕಟ್ಟಿ ಎಡ ಭುಜದ ಮೇಲೆ ತುಂಬಿದ ಕೊಡವನ್ನು ಹಿಡಿದು ಬಲಗೈಯಿಂದ ಚಕ್ಕಡಿಯ ಗಾಲಿಯನ್ನ ಜಾಲಿಬೆಂಚಿ ಬಸವಣ್ಣ ದೇವಸ್ಥಾನದಿಂದ ಪೇಠ ಅಮ್ಮಾಪುರದ ಹನುಮಾನ್ ದೇವಸ್ಥಾನದವರೆಗೆ ಸತತ ಎರಡು ಕಿಲೋ ಮೀಟರ್​ವರೆಗೂ ತಳ್ಳಿ ಪಂದ್ಯ ಗೆದ್ದು ಬೀಗಿದ್ದಾನೆ.

ಇದರ ಕುರಿತು ಗ್ರಾಮದ ಯುವಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ನಮ್ಮ ಗ್ರಾಮದ ಯುವಕ ಯಾರೂ ಮಾಡದ ಸಾಹಸ ಮಾಡಿದ್ದು ಹೆಮ್ಮೆಯ ಸಂಗತಿ ಎಂದರು. ಗ್ರಾಮದ ಜನರು ಯುವಕನ ಸಾಹಸಕ್ಕೆ 11,000 ರೂಪಾಯಿಗಳ ಬಹುಮಾನ ನೀಡುತ್ತಿರುವುದಾಗಿ ತಿಳಿಸಿದರು. ಜಾಲಿಬೆಂಚಿ ಗ್ರಾಮದ ಬಸವಣ್ಣ ದೇವಸ್ಥಾನದಿಂದ ಪೇಠ ಅಮ್ಮಾಪುರದ ಹನುಮಾನ್ ದೇವಸ್ಥಾನದವರೆಗೆ ಎಲ್ಲಿಯೂ ನಿಲ್ಲದೆ ಚಕ್ಕಡಿ ಗಾಲಿ ಉರುಳಿಸಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ABOUT THE AUTHOR

...view details