ಕರ್ನಾಟಕ

karnataka

ETV Bharat / state

ಕತ್ತು ಹಿಸುಕಿ ಪತ್ನಿ ಕೊಲೆ ; ಅನೈತಿಕ ಸಂಬಂಧ ಶಂಕೆ - ಅನೈತಿಕ ಸಂಬಂಧ ಶಂಕೆ

ಯಾದಗಿರಿಯ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಯಾದಗಿರಿಯ ಜಿಲ್ಲೆಯ ಶಹಾಪುರ
ಯಾದಗಿರಿಯ ಜಿಲ್ಲೆಯ ಶಹಾಪುರ

By

Published : May 17, 2023, 3:18 PM IST

ಯಾದಗಿರಿಯ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ

ಯಾದಗಿರಿ:ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಮಲಗಿದ್ದಾಗ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಶಹಾಪುರ ಪೊಲೀಸ್‌ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ. ತಾಲೂಕಿನ ದೋರನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಿ ನಿಂಗಪ್ಪ ಕ್ವಾಣಿ (38) ಕೊಲೆಯಾದ ಮಹಿಳೆ. ಕೊಲೆ ಆರೋಪಿ ನಿಂಗಪ್ಪ ಮಲ್ಲಪ್ಪ ಕ್ವಾಣಿ(43) ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

ಕೌಟುಂಬಿಕ ಕಲಹ ಹಿನ್ನೆಲೆ ಎರಡು ವರ್ಷಗಳಿಂದ ಪತಿ ಪತ್ನಿ ದೂರವಿದ್ದರು. ಮಗಳ ಮದುವೆ ಅಂತ ಪತಿ ನಿಂಗಪ್ಪ ಮನೆಗೆ ವಾಪಸ್ ಬಂದಿದ್ದ. ಮನೆಗೆ ಬಂದವವೇ ಮಂಗಳವಾರ ರಾತ್ರಿ ಮಲಗಿದ್ದಾಗ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಶಹಾಪುರ‌ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಮಹಿಳೆ ಮನೆಯಲ್ಲೇ ಯುವಕ ಶವವಾಗಿ ಪತ್ತೆ: ಇನ್ನೊಂದೆಡೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ ಪಕ್ಕದ ಮನೆಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನು ಮಹಿಳೆಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣ (ಮಾರ್ಚ್​ 12-2023) ರಂದು ನಡೆದಿತ್ತು. ಅನೈತಿಕ ಸಂಬಂಧದ ಹಿನ್ನೆಲೆ ಆತನನ್ನು ಕೊಲೆ ಮಾಡಲಾಗಿದೆ ಎಂದು ಯುವಕನ ಮನೆಯವರು ಆರೋಪ ಮಾಡಿದ್ದರು.

ಗ್ರಾಮದ ಶಿವಶರಣಪ್ಪ ಜಮಾದಾರ್ (28) ಸಾವಿಗೀಡಾದ ಯುವಕ ಎಂಬುದು ತಿಳಿದುಬಂದಿತ್ತು. ಕ್ರೂಸರ್ ಚಾಲಕನಾಗಿದ್ದ ಶಿವಶರಣಪ್ಪಗೆ ಮದುವೆ ಆಗಿರಲಿಲ್ಲ. ಆದ್ರೆ ಪಕ್ಕದ ಮನೆ ಮಹಿಳೆ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆಕೆಯೇ ನನ್ನ ಮಗನನ್ನು ಫೋನ್​ ಮಾಡಿ ಕರೆಸಿಕೊಂಡಿದ್ದಳು ಎಂದು ಮೃತ ಯುವಕನ ತಾಯಿ ಆರೋಪಿಸಿದ್ದರು.

ಇಬ್ಬರು ಮೊಬೈಲ್ ನಲ್ಲಿ ಮಾತಾಡೋದು ಕದ್ದುಮುಚ್ಚು ಭೇಟಿ ಆಗೋದನ್ನು ಮಾಡ್ತಿದ್ರು. ಈ ವಿಷಯ ಕೆಲ ದಿನಗಳ ಹಿಂದೆ ಮಹಿಳೆಯ ಮನೆಯಲ್ಲಿ ಗೊತ್ತಾಗಿ ಶಿವಶರಣಪ್ಪನನ್ನ ಹೊಲಕ್ಕೆ ಕರೆದೊಯ್ದು ಥಳಿಸಿದ್ದರು. ಬಳಿಕ ನಮ್ಮ ಮನೆಯ ಹೆಣ್ಣು ಮಗಳದ್ದು ತಪ್ಪಿದೆ. ಅವನಿಗೆ ಏನು ಮಾಡೋದು ಅಂತ ಸುಮ್ಮನೆ ಬಿಟ್ಟಿದ್ದರಂತೆ. ಅವರ ತಾಯಿಯ ಎದುರು ಆತನಿಗೆ ಬುದ್ಧಿ ಕಲಿಸುವುದಕ್ಕಾಗಿ ಎರಡು ಪೆಟ್ಟು ಹೊಡೆದಿದ್ದೆವು ಅಷ್ಟೇ ಅಂತ ಹೇಳಿಕೊಂಡಿದ್ದರು ಎಂದು ಯುವಕನ ತಾಯಿ ತಿಳಿಸಿದ್ದರು.

ಶನಿವಾರ ರಾತ್ರಿ ಊಟ ಮುಗಿಸಿ ನಮ್ಮ ಟೆರೆಸ್ ಮೇಲೆ ಮಲಗಿದ್ದ. ಆದ್ರೆ ತಡರಾತ್ರಿ ಅವರ ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನಿನ್ನ ಮಗ ಕುಡಿದು ನಮ್ಮ ಮನೆಯಲ್ಲಿ ಮಲಗಿದ್ದಾನೆ ನೋಡು ಬಾ ಎಂದು ಪಕ್ಕದ ಮನೆಯ ವ್ಯಕ್ತಿ ನನ್ನ ಮತ್ತು ನನ್ನ ಪತಿಯನ್ನು ಕರೆದುಕೊಂಡು ಹೋಗಿದ್ದನು. ನಾವು ಹೋಗಿ ನೋಡುವಷ್ಟರಲ್ಲಿ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ತಕ್ಷಣ ಆಸ್ಪತ್ರೆಗೆ ಕರೆದೊಯ್ದಾಗ ನಮ್ಮ ಮಗ ಮೃತಪಟ್ಟಿರೋದು ದೃಢಪಟ್ಟಿತು ಎಂದು ಮೃತನ ತಾಯಿ ಮಲ್ಲಮ್ಮ ಘಟನೆ ಬಗ್ಗೆ ವಿವರಿಸಿದ್ದರು.

ಇದನ್ನೂ ಓದಿ:ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮನೆಯಲ್ಲೇ ಯುವಕ ಶವವಾಗಿ ಪತ್ತೆ ಕೊಲೆ ಶಂಕೆ

ABOUT THE AUTHOR

...view details