ಕರ್ನಾಟಕ

karnataka

ETV Bharat / state

ಸುರಪುರ: ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು - ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

ರತ್ತಾಳ ಗ್ರಾಮದ ಹೊನ್ನಕೇರಪ್ಪ ಮಲ್ಲಪ್ಪ ಗಡ್ಡದರ ಅವರಿಗೆ ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ.

Man died by current shock
Man died by current shock

By

Published : Aug 21, 2020, 9:29 PM IST

ಸುರಪುರ: ಹೊಲದಲ್ಲಿ ಕೆಲಸ ಮಾಡಲು ಹೋದ ವೇಳೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ರತ್ತಾಳ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

ತಾಲೂಕಿನ ರತ್ತಾಳ ಗ್ರಾಮದ ಹೊನ್ನಕೇರಪ್ಪ ಮಲ್ಲಪ್ಪ ಗಡ್ಡದರ ಎಂಬ (28 ವರ್ಷ) ವ್ಯಕ್ತಿ ತಮ್ಮ ಹೊಲದಲ್ಲಿ ಬೋರ್‌ವೆಲ್‌ ಹಾಕಿಸಿದ್ದು, ಪಂಪ್‌ಸೆಟ್‌ಗೆ ಅಳವಡಿಸಲಾದ ವಿದ್ಯುತ್ ತಂತಿಯನ್ನು ಕಟ್ಟಿಗೆಯಿಂದ ಮೇಲೆ ಹಾಕಲು ಹೋಗಿದ್ದಾರೆ. ಈ ವೇಳೆ ತಂತಿ ಕೈಗೆ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಮೃತದೇಹವನ್ನು ಸುರಪುರ ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಈರಣ್ಣ ಹಳಿಚಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details