ಯಾದಗಿರಿ: ಇಲ್ಲಿನ ವಿಶ್ವಾರಾಧ್ಯ ಗದ್ದುಗೆ ಬಳಿ ಅನಾಥ ನವಜಾತ ಗಂಡು ಶಿಶು ಪತ್ತೆಯಾಗಿದೆ. ಇಲ್ಲಿನ ಅಬ್ಬೇತುಮಕುರು ಗ್ರಾಮದ ಬಳಿ ಇರುವ ವಿಶ್ವಾರಾಧ್ಯ ಗದ್ದುಗೆ ಬಳಿ ಯಾರೋ ಒಂದು ದಿನದ ಮಗುವನ್ನು ಇಟ್ಟು ಹೋಗಿದ್ದಾರೆ.
ಯಾದಗಿರಿ: ವಿಶ್ವಾರಾಧ್ಯ ಗದ್ದುಗೆ ಬಳಿ ಒಂದು ದಿನದ ಗಂಡು ಶಿಶು ಪತ್ತೆ - GIIMSHospital in Kalaburagi
ಅಬ್ಬೇತುಮಕುರು ಗ್ರಾಮದ ಬಳಿ ಒಂದು ದಿನದ ಶಿಶು ಪತ್ತೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಶ್ವರಾಧ್ಯ ಗದ್ದುಗೆ ಬಳಿ ಒಂದು ದಿನದ ಗಂಡು ಶಿಶು ಪತ್ತೆ
ಬಳಿಕ ಮಗುವನ್ನು ಕಂಡು ಕಾಶಿನಾಥ ದೊರೆ ಎಂಬುವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧಾರದ ಮೇಲೆ ಸ್ಥಳಕ್ಕಾಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಶಿಶುವನ್ನು ರಕ್ಷಿಸಿ ಯಾದಗಿರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಒಂದು ದಿನದ ಮಗು ಆರೋಗ್ಯವಾಗಿದ್ದು, ಹೆಚ್ಚಿನ ಆರೈಕೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು. ನಂತರ ಅಮೂಲ್ಯ ಶಿಶು ಗೃಹಕ್ಕೆ ಒಪ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.