ಸುರಪುರ:ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದ ಕಥಾ ಹಂದರದ ಮಹಾನಾಯಕ ಧಾರಾವಾಹಿ ಬೆಂಬಲಿಸಿ ಹಸನಾಪುರ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಬ್ಯಾನರ್ ಹಾಕುವ ಮೂಲಕ ಧಾರಾವಾಹಿಗೆ ಬೆಂಬಲ ಸೂಚಿಸಲಾಯಿತು.
ಅಂಬೇಡ್ಕರ್ ಅಭಿಮಾನಿಗಳಿಂದ ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣ - ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣ
ಹಸನಾಪುರದಲ್ಲಿ ಸಾವಿರಾರು ಜನ ಅಂಬೇಡ್ಕರ್ ಅಭಿಮಾನಿಗಳು ಸೇರಿ ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣಗೊಳಿಸಿದರು. ಜೊತೆಗೆ ಅಂಬೇಡ್ಕರ್ ಹಬ್ಬ ಎಂದು ವಿಶೇಷವಾಗಿ ಕಾರ್ಯಕ್ರಮ ಆಚರಿಸಿದರು.
![ಅಂಬೇಡ್ಕರ್ ಅಭಿಮಾನಿಗಳಿಂದ ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣ Mahanayak serial banner unveiled](https://etvbharatimages.akamaized.net/etvbharat/prod-images/768-512-8876949-593-8876949-1600656579148.jpg)
ಸಾವಿರಾರು ಜನ ಅಂಬೇಡ್ಕರ್ ಅಭಿಮಾನಿಗಳು ಸೇರಿ ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣಗೊಳಿಸುವ ಜೊತೆಗೆ ಅಂಬೇಡ್ಕರ್ ಹಬ್ಬ ಎಂದು ವಿಶೇಷವಾಗಿ ಕಾರ್ಯಕ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಾಲ್ಯದಿಂದಲೂ ಪಟ್ಟ ಕಷ್ಟಗಳು ಹಾಗೂ ಅವರ ಆದರ್ಶ ಜೀವನದ ಕುರಿತು ಮಹಾನಾಯಕ ಧಾರಾವಾಹಿಯ ಮೂಲಕ ತೋರಿಸುತ್ತಿರುವುದು ಸಂತೋಷದಾಯಕವಾಗಿದೆ.
ಪ್ರತಿಯೊಬ್ಬರೂ ಈ ಧಾರಾವಾಹಿಯನ್ನು ನೋಡುವ ಜೊತೆಗೆ ಅಂಬೇಡ್ಕರ್ ಅವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ. ಅಲ್ಲದೆ ಈ ಧಾರಾವಾಹಿಯನ್ನು ಪ್ರಸಾರ ಮಾಡದಂತೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಕರೆ ಮಾಡುತ್ತಿರುವುದನ್ನು ಅಂಬೇಡ್ಕರ್ ಅಭಿಮಾನಿಗಳು ಖಂಡಿಸುವ ಜೊತೆಗೆ ಎಲ್ಲರೂ ರಾಘವೇಂದ್ರ ಹುಣಸೂರು ಅವರಿಗೆ ಬೆಂಬಲಿಸುವುದಾಗಿ ತಿಳಿಸಿದರು.