ಕರ್ನಾಟಕ

karnataka

ETV Bharat / state

ಜನರಿಗೆ ಕೊರೊನಾ, ದನಗಳಿಗೆ ಲಂಪಿ ಚರ್ಮ ಕಾಯಿಲೆ: ಜಾನುವಾರುಗಳಿಗೂ ಈಗ ಕ್ವಾರಂಟೈನ್​​​!? - Gurmatkal News

ಕೊವೀಡ್ ಭೀತಿಯಿಂದ ಕಂಗಲಾದ ರೈತರು ಈಗ ಜಾನುವಾರುಗಳಿಗೆ ಮಾರಕ ಕಾಯಿಲೆಯೊಂದು ವ್ಯಾಪಿಸಿದ ಹಿನ್ನೆಲೆ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

ದನಗಳಿಗೆ ಲಂಪಿ ಚರ್ಮ ಕಾಯಿಲೆ
ದನಗಳಿಗೆ ಲಂಪಿ ಚರ್ಮ ಕಾಯಿಲೆ

By

Published : Aug 31, 2020, 9:18 AM IST

ಗುರುಮಠಕಲ್: ಕೊರೊನಾ ಭೀತಿಯಿಂದ ತತ್ತರಿಸಿದ್ದು, ಈಗ ಜಾನುವಾರುಗಳಿಗೆ ಮಾರಕ ಕಾಯಿಲೆ ವ್ಯಾಪಿಸುತ್ತಿರುವುದರಿಂದ ರೈತರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ರೋಗ ಪೀಡಿತ ದನಗಳಿಗೆ ಕ್ವಾರಂಟೈನ್ ಮಾಡಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಬಹಳ ವರ್ಷಗಳ ನಂತರ ದನಗಳಿಗೆ ಲಂಪಿ ಚರ್ಮ ಕಾಯಿಲೆ ವ್ಯಾಪಿಸಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

ಕೊವೀಡ್ ಭೀತಿಯಿಂದ ಕಂಗಲಾದ ರೈತರು ಈಗ ಜಾನುವಾರುಗಳಿಗೆ ಮಾರಕ ಕಾಯಿಲೆ ವ್ಯಾಪಿಸಿದ ಹಿನ್ನೆಲೆ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕಿನ ಜಾನುವಾರುಗಳಿಗೆ ಲಂಪಿ ಚರ್ಮ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆ ರೋಗ ಪೀಡಿತ ಜಾನುವಾರುಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.

ತಾಲೂಕಿನ, ಚಂಡರಕಿ, ಪುಟಪಾಕ, ಮಾಡೇಪಲ್ಲಿ, ಚಪೆಟ್ಲಾ, ಯದ್ಲಾಪುರ ರಂಪೂರ್, ಕಕಾಲವಾರ, ಎಂ.ಟಿ.ಪಲ್ಲಿ, ಬೋರಬಂಡ, ದರ್ಮಪೂರ್, ಚಿನ್ನಕರ್ ಗುಂಜನೂರು, ಕೊಂಕಲ್, ಅನಪುರ, ಗಾಜರಕೋಟ್, ಮೊಟ್ನಳ್ಳಿ, ಚಿಂತಕೂಟಾ, ಕಂದಕೂರ, ಚಿಂತನಹಳ್ಳಿ, ಕಮಾಲನಗರ, ಮೊದಲಾದ ಗ್ರಾಮಗಳಲ್ಲಿ ಜಾನುವಾರುಗಳಲ್ಲಿ ಈ ರೋಗ ಪತ್ತೆಯಾಗಿದೆ.

ದನಗಳಿಗೆ ಲಂಪಿ ಚರ್ಮ ಕಾಯಿಲೆ

ರೋಗ ಪೀಡಿತ ದನಗಳಿಂದ ಆರೋಗ್ಯವಂತ ದನಗಳಿಗೆ ಈ ರೋಗ ಹರಡುವ ಸಾಧ್ಯತೆ ಇರುವದರಿಂದ ಕಾಯಿಲೆಯಿಂದ ಬಳಲುತ್ತಿರುವ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟಿ ಹಾಕಿ ಐದು ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ಪೀಡಿತ ಜಾನುವಾರುಗಳಲ್ಲಿ ಗುಳ್ಳೆ ಹಾಗೂ ಜ್ವರ ಹೆಚ್ಚಾಗಿ ಕಾಣಿಸಿಕೊಂಡಿದ್ದು, ದನಗಳು ಮೇವು ಸರಿಯಾಗಿ ತಿನ್ನುತ್ತಿಲ್ಲ, ಹಾಲು ಸರಿಯಾಗಿ ಕೊಡುತ್ತಿಲ್ಲ. ಇದರಿಂದ ಜಾನುವಾರುಗಳನ್ನು ಮೇಯಿಸಲು ಹೊಡೆದುಕೊಂಡು ಹೋಗಲು ಭಯ ಪಡುವಂತಾಗಿದೆ. ಎಲ್ಲಿ ಸೋಂಕಿತ ಜಾನುವಾರುಗಳಿಂದ ತಮ್ಮ ದನಗಳಿಗೆ ಕಾಯಿಲೆ ಹರಡುತ್ತದೆಯೋ ಎಂಬ ಆತಂಕ ಕಾಡುತ್ತಿದೆ.

ಜಿಲ್ಲಾ ಉಸ್ತುವಾರಿ, ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್​ ಅವರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕಾಯಿಲೆ ವ್ಯಾಪಿಸಿದೆ. ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳಲ್ಲಿ ಈ ಹೊಸ ರೋಗ ಕಾಣಿಸಿಕೊಂಡಿದೆ. ರೈತರು ಭಯ ಪಡದೆ ರೋಗ ಪೀಡಿತ ಜಾನುವಾರುಗಳನ್ನು ಪ್ರತ್ಯೇಕವಾಗಿ ಇರಿಸಬೇಕು. ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿ ಡಾ. ವಿಜಯಕುಮಾರ ಹೇಳಿದ್ದಾರೆ.

ABOUT THE AUTHOR

...view details